Tv Shows

ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಬದಲಾದ ಸಮಯದಲ್ಲಿ ಧಾರಾವಾಹಿಗಳು ಮತ್ತು ಹಳೆಯ ರಿಯಾಲಿಟಿ ಶೋಗಳು ಪ್ರಸಾರವಾಗಲಿದೆ !

ಕೊರೊನಾ ಕಾರಣದಿಂದ ಸಂಪೂರ್ಣ ಭಾರತ ಲಾಕ್ ಡೌನ್ ಆಗಿದ್ದು, ಸಿನಿಮಾ ಹಾಗೂ ಕಿರುತೆರೆಯ ಶೂಟಿಂಗ್ ಗಳೆಲ್ಲವೂ ಬಂದ್ ಆಗಿದೆ.. ಆದರೆ ಕನ್ನಡದ ಚಾನಲ್ ಗಳು ಜವಾಬ್ದಾರಿ ತೋರಿ ಕೊರೊನಾ ಹರಡಬಾರದೆಂದು ಲಾಕ್ ಡೌನ್ ಗೂ ಕೆಲ ದಿನಗಳ ಮುನ್ನವೇ ಧಾರಾವಾಹಿಗಳ ಶೂಟಿಂಗ್ ಅನ್ನು ನಿಲ್ಲಿಸಿದ್ದವು..

ಆ ನಂತರ ಬ್ಯಾಂಕಿಂಗ್ ಇದ್ದಷ್ಟು ದಿನಗಳು ಧಾರಾವಾಹಿಗಳು ಪ್ರಸಾರಗೊಂಡವು..
ಕನ್ನಡದ ನಂಬರ್ ಒನ್ ಚಾನಲ್ ಎನ್ನಲಾಗುವ ಜೀ ವಾಹಿನಿ‌ ಕೂಡ ಏಪ್ರಿಲ್ 3 ರವರೆಗೆ ಎಲ್ಲಾ ಧಾರಾವಾಹಿಗಳ ಹೊಸ ಸಂಚಿಕೆಗಳನ್ನು ಪ್ರಸಾರ ಮಾಡಿಕೊಂಡು ಬಂದಿತ್ತು.. ಆದರೀಗ ಧಾರಾವಾಹಿಗಳ ಬ್ಯಾಂಕಿಂಗ್ ಮುಗಿದಿದ್ದು, ಶೂಟಿಂಗ್ ನಡೆಯದ ಕಾರಣ ಮರು ಪ್ರಸಾರದ ಮೊರೆ ಹೋಗಿದೆ..

ಆದರೆ ಕಾರ್ಯಕ್ರಮಗಳು ಹಾಗೂ ಧಾರಾವಾಹಿಗಳ ಸಂಪೂರ್ಣ ವೇಳಾಪಟ್ಟಿಯನ್ನು ಬದಲಿಸಿ ಮ್ಯಾರಥಾನ್ ರೀತಿಯಲ್ಲಿ ಪ್ರೇಕ್ಷಕರಿಗೆ ಮತ್ತಷ್ಟು ಮನರಂಜನೆ ನೀಡಲು ಹೊರಟಿದೆ.. ಕೆಲವು ಧಾರಾವಾಹಿಗಳ ಹೊಸ ಸಂಚಿಕೆಗಳು ಪ್ರಸಾರವಾದರೆ.. ಕೆಲ ಧಾರಾವಾಹಿಗಳು ಮೊದಲ ಸಂಚಿಕೆಯಿಂದ ಬದಲಾದ ಹೆಚ್ಚುವರಿ ಸಮಯದಲ್ಲಿ ಮರು ಪ್ರಸಾರವಾಗಲಿದೆ..

ಜೀ ವಾಹಿನಿ ನೀಡಿರುವ ಮಾಹಿತಿ ಪ್ರಕಾರ ಬೆಳಿಗ್ಗೆ 8 ಗಂಟೆಗೆ ಎಂದಿನಂತೆ ಮಹರ್ಷಿವಾಣಿ ಪ್ರಸಾರವಾಗಲಿದೆ.. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ.. ಜೊತೆಗೆ ಇದು ಹೊಸ ಸಂಚಿಕೆಯೇ ಆಗಿದೆ.. ಬೆಳಿಗ್ಗೆ 9.30 ರಿಂದ 11ರವರೆಗೆ ಸರಿಗಮಪ ಸೀಸನ್ 15 ಪ್ರಸಾರವಾಗಲಿದೆ..

ಇನ್ನು ಬೆಳಿಗ್ಗೆ 11 ರಿಂದ 12.30 ರವರೆಗೆ ಎಲ್ಲರ ಅಚ್ಚುಮೆಚ್ಚಿನ ಕಾರ್ಯಕ್ರಮ ಡ್ರಾಮಾ ಜ್ಯೂನಿಯರ್ಸ್ ಸೀಸನ್ 1 ಶೋ ಪ್ರಸಾರವಾಗಲಿದೆ.. 12.30ಕ್ಕೆ ಹೊಚ್ಚ ಹೊಸ ಚಲನಚಿತ್ರಗಳು ಪ್ರಸಾರವಾಗಲಿದ್ದು, ಈ ಸೋಮವಾರ ಸಾರ್ವಜನಿಕರಿಗೆ ಸುವರ್ಣಾವಕಾಶ ಸಿನಿಮಾ ಪ್ರಸಾರವಾಗಲಿದೆ.. ಸೋಮವಾರ ಮಧ್ಯಾಹ್ನ 3 ಗಂಟೆಗೆ ಜೀ ಕನ್ನಡ ಕಾಮಿಡಿ ಅವಾರ್ಡ್ಸ್ 2020 ಕಾರ್ಯಕ್ರಮ ಪ್ರಸಾರವಾಗಲಿದ್ದು ಪ್ರತಿದಿನ ಜೀ ವಾಹಿನಿ ನಡೆಸಿರುವ ಒಂದೊಂದು ಅವಾರ್ಡ್ಸ್ ಕಾರ್ಯಕ್ರಮ ಪ್ರಸಾರವಾಗಬಹುದು ಎಂಬ ನಿರೀಕ್ಷೆ ಇದೆ..

ಇನ್ನು ಎಲ್ಲರೂ ಪ್ರತಿದಿನ ಕಾಯುವ ಜೊತೆಜೊತೆಯಲಿ ಧಾರಾವಾಹಿ ಬರೋಬ್ಬರಿ 2 ಗಂಟೆಗಳ ಪ್ರಸಾರದ ಮೂಲಕ ಮನರಂಜನೆ ನೀಡಲಿದೆ.. ಹೌದು ಸಂಜೆ 6 ರಿಂದ 8 ಗಂಟೆಯವರೆಗೆ ಜೊತೆಜೊತೆಯಲಿ ಧಾರಾವಾಹಿ ಮ್ಯಾರಥಾನ್ ರೀತಿಯಲ್ಲಿ ಪ್ರಸಾರವಾಗಲಿದೆ.. ಇನ್ನು 8 ಗಂಟೆಗೆ ಎಂದಿನಂತೆ ಗಟ್ಟಿಮೇಳ ಧಾರಾವಾಹಿಯ ಹೊಸ ಸಂಚಿಕೆ ಪ್ರಸಾರವಾಗಲಿದ್ದು, ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.. 8.30ಕ್ಕೆ ಕಮಲಿ ಧಾರಾವಾಹಿಯ ಹೊಸ ಸಂಚಿಕೆ ಪ್ರಸಾರವಾಗಲಿದೆ..

ಇನ್ನು ಎಂದಿನಂತೆ 9 ಕ್ಕೆ ನಾಗಿಣಿ 2 ಹಾಗೂ 9.30ಕ್ಕೆ ಪಾರು ಹೊಸ ಸಂಚಿಕೆಗಳು ಪ್ರಸಾರವಾಗಲಿದ್ದು ಇದರಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ.. ಇನ್ನು ರಾತ್ರಿ 10 ಗಂಟೆಗೆ ಕಾಮಿಡಿ ಕಿಲಾಡಿಗಳು ಸೀಸನ್ 1 ಪ್ರಸಾರವಾದರೆ 11.30ಕ್ಕೆ ಈ ಹಿಂದೆ ಸೃಜನ್ ಲೋಕೇಶ್ ನಡೆಸಿಕೊಡುತ್ತಿದ್ದ ಛೋಟಾ ಚಾಂಪಿಯನ್ ಕಾರ್ಯಕ್ರಮ ಪ್ರಸಾರವಾಗಲಿದೆ..

Trending

To Top