Karnataka

ಜಾತಿ, ಧರ್ಮ ಎಂಬ ಬೇಧ ಭಾವ ಬಿಟ್ಟು ದೀಪ ಬೆಳಗೋಣ ಎಂದು ಜಾಗೃತಿ ಮೂಡಿಸಿದ್ದಾರೆ ಬಾಗಲಕೋಟೆಯ ಶಾಲಾ ಮಕ್ಕಳು

ನಾಳೆ ರಾತ್ರಿ 9 ಗಂಟೆಗೆ ಎಲ್ಲರೂ ದೀಪ ಬೆಳಗೋಣ ಅಂತ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಶಾಲಾ ಮಕ್ಕಳು ಜಾಗೃತಿ ಕಾರ್ಯ ಕೈಗೊಂಡಿದ್ದು, ಜಾತಿ, ಧರ್ಮ ಮೀರಿ ಎಲ್ಲರೂ ಪ್ರಧಾನಿಗಳ ಕರೆಗೆ ಸ್ಪಂದಿಸೋಣ ಅಂತ ಮನವಿ ಮಾಡಿದ್ದಾರೆ.

ಗುಳೇದಗುಡ್ಡದ ಸೇಂಟ್ ಜೇವಿಯರ್ ಶಾಲೆಯ ಮಕ್ಕಳಿಂದ ಜಾಗೃತಿ ಕಾರ್ಯ ನಡೆದಿದ್ದು, ಹಿಂದು, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಧರ್ಮಗಳಿಗೆ ಸಂಬಂಧಿಸಿದಂತೆ ವೇಷ ಧರಿಸಿದ ಮಕ್ಕಳು ಆಯಾ ಧರ್ಮಗಳ ಚಿಹ್ನೆ ಹಿಡಿದು, ಮೊಂಬತ್ತಿ ಬೆಳಗಿದರು. ಪ್ರಧಾನಮಂತ್ರಿಗಳು ಹೇಳಿದಂತೆ ನಾಳೆ ರಾತ್ರಿ 9 ಗಂಟೆಯಿಂದ 9 ನಿಮಿಷ ಎಲ್ಲರೂ ದೀಪ ಹಚ್ಚುವ ಮೂಲಕ ಕೊರೊನಾ ಮಹಾಮಾರಿಯನ್ನ ತೊಲಗಿಸೋಣ ಅಂತ ಘೋಷಣೆ ಕೂಗುತ್ತಾ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿದರು. ಜಾತಿ, ಧರ್ಮ ಮೀರಿ ಎಲ್ಲರೂ ಪ್ರಧಾನಿಗಳ ಕರೆಗೆ ಸ್ಪಂದಿಸೋಣ ಅಂತ ಮನವಿ ಮಾಡಿದ್ದಾರೆ.

Trending

To Top