Kannada Cinema News

ಜನವರಿ 19 ರಿಂದ ಪುನೀತ್ ರಾಜ್ ಕುಮಾರ್ ಅಭಿನಯದ ‘ಜೇಮ್ಸ್ ‘ಚಿತ್ರೀಕರಣ ಆರಂಭ

ಚೇತನ್ ಕುಮಾರ್ ನಿರ್ದೇಶನದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಆಕ್ಷನ್ ಕಮರ್ಷಿಯಲ್ ಎಂಟರ್ ಟೈನರ್ ಚಿತ್ರ ಜೆಮ್ಸ್ ಜನವರಿ 19 ರಿಂದ ಚಿತ್ರೀಕರಣ ಆರಂಭವಾಗಲಿದೆ.ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಕಿಶೋರ್ ಪತಿಕೊಂಡಾ ಜೇಮ್ಸ್ ಚಿತ್ರವನ್ನು ನಿರ್ಮಿಸುತ್ತಿದ್ದು, ಚರಣ್ ರಾಜ್ ಸಂಗೀತ ಸಂಯೋಜಿಸುತ್ತಿದ್ದಾರೆ. ಶ್ರೀಶಾ ಕುಡುವಳ್ಳಿ ಅವರ ಛಾಯಾಗ್ರಾಹಣವಿರಲಿದೆ. ಚೇತನ್ ಕುಮಾರ್ ಈ ಹಿಂದೆ ಬಹದ್ದೂರ್ ಹಾಗೂ ಭಜರಂಗಿ ಚಿತ್ರವನ್ನು ನಿರ್ದೇಶಿಸಿದ್ದರು. ಆದಾಗ್ಯೂ, ಉಳಿದ ಪಾತ್ರಗಳನ್ನು ಇನ್ನೂ ಅಂತಿಮ ಗೊಳಿಸಿಲ್ಲ.

ಈ ಮಧ್ಯೆ ಪುನೀತ್ ರಾಜ್ ಕುಮಾರ್ ಅವರ ಮುಂದಿನ ಯುವರತ್ನ ಚಿತ್ರದ ಚಿತ್ರೀಕರಣ ಕೊನೆಯ ಹಂತದಲ್ಲಿದೆ. ಜನವರಿ 8 ರಂದು ಒಂದು ಹಾಡಿನ ಚಿತ್ರೀಕರಣ ನಡೆಯಲಿದೆ.

ರಾಜ್ ಕುಮಾರ್ ನಂತರ ಸಂತೋಷ್ ಆನಂದ್ ರಾಮ್ ಪುನೀತ್ ರಾಜ್ ಒಟ್ಟಾಗಿ ಮಾಡುತ್ತಿರುವ ಈ ಚಿತ್ರದಲ್ಲಿ ಸಯ್ಯೇಶಾ ನಾಯಕಿ ನಟಿಯಾಗಿದ್ದಾರೆ.

ಧನಂಜಯ್ , ದಿಗಂತ್, ಸೋನುಗೌಡ ಮತ್ತು ಪ್ರಕಾಶ್ ರಾಜ್ ಯುವರತ್ನ ಚಿತ್ರದಲ್ಲಿದ್ದಾರೆ. ಯುವರತ್ನ , ಜೇಮ್ಸ್ ಹಾಗೂ ಮತ್ತೊಂದು ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಈ ವರ್ಷ ಅಭಿನಯಿಸಲಿದ್ದಾರೆ.

Trending

To Top