gossip

ಚಿರಂಜೀವಿ ಅಳಿಯ ಕಲ್ಯಾಣ್ ದೇವ್ ಜೊತೆ ರಚಿತಾ ರಾಮ್ ರೊಮ್ಯಾನ್ಸ್

ಡಿಂಪಲ್ ಕ್ವೀನ್ ರಚಿತಾ ರಾಮ್ ಸದ್ಯಕ್ಕೆ ತೆಲುಗು ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಮೆಗಾಸ್ಟಾರ್ ಚಿರಂಜೀವಿ ಅಳಿಯ ಕಲ್ಯಾಣ್ ದೇವ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

ರಿಜ್ವಾನ್ ಎಂಟರ್‍ಟೈನ್‍ಮೆಂಟ್ ಲಾಂಛನದಲ್ಲಿ ರಿಜ್ವಾನ್ ಹಾಗೂ ಖುಷಿ ಅವರು ನಿರ್ಮಿಸುತ್ತಿರುವ ದಿಸ್ ಪ್ರಾಪರ್ಟಿ ಬಿಲಾಂಗ್ಸ್ ಟು ಮೀನಾಕ್ಷಿ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ.

ಕಲ್ಯಾಣ್‍ದೇವ್ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿಯಾಗಿ ರಚಿತಾರಾಂ ಅಭಿನಯಿಸುತ್ತಿದ್ದಾರೆ. ಸಾಧುಕೋಕಿಲ, ಶಿವರಾಜ್.ಕೆ.ಆರ್.ಪೇಟೆ, ಪ್ರಗತಿ, ರಾಜೇಂದ್ರಪ್ರಸಾದ್, ಅಜೇಯ್, ನರೇಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಕನ್ನಡ ಹಾಗೂ ತೆಲುಗಿನಲ್ಲಿ ನಿರ್ಮಾಣವಾಗಿತ್ತಿರುವ ಈ ಚಿತ್ರವನ್ನು ಪುಲಿ ವಾಸು ನಿರ್ದೇಶಿಸುತ್ತಿದ್ದಾರೆ. ತೆಲುಗಿನಲ್ಲಿ ಹತ್ತಕ್ಕೂ ಹೆಚ್ಚು ಧಾರಾವಾಹಿಗಳನ್ನು ನಿರ್ದೇಶಿಸಿರುವ ಅನುಭವ ನಿರ್ದೇಶಕರಿಗಿದೆ.

ತಂದೆ-ಮಗಳ ಬಾಂಧವ್ಯದ ಕಥಾ ಹಂದರ ಹೊಂದಿರುವ ಈ ಚಿತ್ರಕ್ಕೆ ಬೆಂಗಳೂರು, ಚಿಕ್ಕಮಗಳೂರು, ಹೈದರಾಬಾದ್, ವಿಶಾಖಪಟ್ಟಣ ಮುಂತಾದ ಕಡೆ 60 ದಿನಗಳ ಚಿತ್ರೀಕರಣ ನಡೆಯಲಿದೆ.

5 ಹಾಡುಗಳಿರುವ ಈ ಚಿತ್ರಕ್ಕೆ ಎಸ್.ತಮನ್ ಸಂಗೀತ ನೀಡುತ್ತಿದ್ದಾರೆ. ಚಿತ್ರದಲ್ಲಿ ಮೂರು ಸಾಹಸ ಸನ್ನಿವೇಶಗಳಿದ್ದು, ಸ್ವಾಮಿ, ಡ್ರ್ಯಾಗನ್ ಪ್ರಕಾಶ್ ಅವರ ಸಾಹಸ ನಿರ್ದೇಶನವಿದೆ. ಶ್ಯಾಂ.ಕೆ.ನಾಯ್ಡು ಛಾಯಾಗ್ರಹಣ, ಮಾರ್ತಾಂಡ್.ಕೆ.ವೆಂಕಟೇಶ್ ಸಂಕಲನವಿದೆ.

Trending

To Top