Film News

ಚಿತ್ರಮಂದಿರದಲ್ಲೇ ಸಮಂತಾ ಅಭಿಮಾನಿ ಹೃದಯಾಘಾತದಿಂದ ನಿಧನ !

ಟಾಲಿವುಡ್ ನಟಿ ಸಮಂತಾ ಮತ್ತು ಶರ್ವಾನಂದ್ ಅಭಿನಯದ ರೊಮ್ಯಾಂಟಿಕ್ ಮತ್ತು ಎಮೋಷನಲ್ ಸಿನಿಮಾ ‘ಜಾನು’ ಮೊನ್ನೆ ಮೊನ್ನೆಯಷ್ಟೇ ಬಿಡುಗಡೆ ಆಗಿದೆ. ತಮಿಳಿನ ಸೂಪರ್ ಹಿಟ್ ’96’ ಚಿತ್ರದ ರೀಮೇಕ್ ಈ ‘ಜಾನು’. ನಿರೀಕ್ಷಿಸಿದ ಮಟ್ಟಕ್ಕೆ ‘ಜಾನು’ ಚಿತ್ರಕ್ಕೆ ಓಪನ್ನಿಂಗ್ ಸಿಕ್ಕಿಲ್ಲ. ಆದರೂ, ಸಮಂತಾ ಅಪ್ಪಟ ಅಭಿಮಾನಿಗಳು ಮಾತ್ರ ‘ಜಾನು’ ಚಿತ್ರವನ್ನು ಕಣ್ತುಂಬಿಕೊಳ್ಳಲು ಥಿಯೇಟರ್ ನತ್ತ ಮುಗಿಬೀಳುತ್ತಿದ್ದಾರೆ.

‘ಜಾನು’ ಚಿತ್ರವನ್ನು ಕಣ್ತುಂಬಿಕೊಳ್ಳಲು ಹೋದ ವ್ಯಕ್ತಿಯೊಬ್ಬ ಥಿಯೇಟರ್ ನಲ್ಲೇ ಪ್ರಾಣಬಿಟ್ಟ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ‘ಜಾನು’ ಚಿತ್ರ ವೀಕ್ಷಿಸುತ್ತಿರುವಾಗಲೇ, ಹೃದಯಾಘಾತದಿಂದ ವ್ಯಕ್ತಿ ಮೃತಪಟ್ಟಿದ್ದಾನೆ ಅಂತ ಹೇಳಲಾಗುತ್ತಿದೆ.

ಹೈದರಾಬಾದ್ ನ ಗೋಕುಲ್ ಥಿಯೇಟರ್ ನಲ್ಲಿ ‘ಜಾನು’ ಚಿತ್ರದ ಪ್ರದರ್ಶನ ನಡೆಯುತ್ತಿತ್ತು. ಎಲ್ಲರಂತೆ ‘ಜಾನು’ ಚಿತ್ರವನ್ನು ವೀಕ್ಷಿಸಲು ವ್ಯಕ್ತಿಯೊಬ್ಬ ಚಿತ್ರಮಂದಿರದ ಒಳಗೆ ಹೋಗಿದ್ದಾನೆ. ಆದ್ರೆ, ಚಿತ್ರ ಮುಗಿದರೂ ಆ ವ್ಯಕ್ತಿ ಥಿಯೇಟರ್ ನಿಂದ ಆಚೆ ಬರಲಿಲ್ಲ. ಹೀಗಾಗಿ, ಚಿತ್ರಮಂದಿರದ ಸಿಬ್ಬಂದಿ ಹತ್ತಿರ ಹೋದಾಗ ಅನುಮಾನಗೊಂಡಿದ್ದಾರೆ

ಚಿತ್ರಮಂದಿರದ ಸಿಬ್ಬಂದಿ ಕೂಡಲೆ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು, ಆ ವ್ಯಕ್ತಿಯ ದೇಹವನ್ನು ಹತ್ತಿರದ ಗಾಂಧಿ ಆಸ್ಪತ್ರೆ ಕರೆದೊಯ್ದಿದ್ದಾರೆ. ಹೃದಯಾಘಾತದಿಂದ ಆ ವ್ಯಕ್ತಿ ಮೃತಪಟ್ಟಿದ್ದಾನೆಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

Trending

To Top