Film News

ಗಾಯಗೊಂಡಿಲ್ಲ ಮುಳ್ಳು ಪರಚಿದ್ದಷ್ಟೇ ಎಂದು ಸ್ವಷ್ಟನೆ ನೀಡಿದ ತಲೈವಾ : Man V/S Wild

ಬ್ರಿಟಿಷ್ ಸಾಹಸಿ ಬೇರ್ ಗ್ರಿಲ್ ಜೊತೆ ಕರ್ನಾಟಕದ ಬಂಡೀಪುರದ ಹುಲಿ ಸಂರಕ್ಷಣಾ ಮತ್ತು ರಾಷ್ಟ್ರೀಯ ಉದ್ಯಾನದಲ್ಲಿ ಮ್ಯಾನ್ ವರ್ಸ್ಸಸ್ ವೈಲ್ಡ್ ಕಾರ್ಯಕ್ರಮದ ಶೂಟಿಂಗ್ ನಲ್ಲಿರುವ ಸೂಪರ್ ಸ್ಟಾರ್ ರಜನಿಕಾಂತ್ ಅವರು ಸ್ಥಳದಲ್ಲಿ ಗಾಯಗೊಂಡಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಡಿ, ಅಭಿಮಾನಿಗಳಲ್ಲಿ ಆತಂಕ ಉಂಟುಮಾಡಿತ್ತು.

ಆದರೆ, ಇದು ನಿಜವಲ್ಲ. ಶೂಟಿಂಗ್ ವೇಳೆ ರಜನಿಕಾಂತ್ ಅವರಿಗೆ ತರಚು ಗಾಯಗಳಾಗಿವೆ ಎಂಬ ಮಾಹಿತಿ ಬಂದಿದೆ. ಅಲ್ಲದೇ ಬೇರ್ ಜೊತೆಗಿನ ಒಂದು ದಿನದ ಚಿತ್ರೀಕರಣ ಮುಗಿಸಿ ರಜನಿ ಇದೀಗ ಚೆನ್ನೈಗೆ ಹಿಂತಿರುಗಿದ್ದಾರೆ. ನಿನ್ನೆ ಬೆಳಿಗ್ಗೆ 11 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ ಈ ಶೂಟಿಂಗ್ ನಡೆದಿದೆ.

ಬಳಿಕ ಚೆನ್ನೈ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ರಜನಿ ಅವರು ತನ್ನ ಶೂಟಿಂಗ್ ಅನುಭವದ ಬಗ್ಗೆ ಹೇಳಿದ್ದಿಷ್ಟು, ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮದ ಶೂಟಿಂಗ್ ಮುಗಿಸಿದ್ದೇನೆ.

ಶೂಟಿಂಗ್ ನಡೆಯುತ್ತಿದ್ದ ಜಾಗದಲ್ಲಿ ಬಹಳಷ್ಟು ಮುಳ್ಳುಗಿಡಗಳಿದ್ದವು. ಹೀಗಾಗಿ ತಮಗೆ ಅಲ್ಲಲ್ಲಿ ಸ್ವಲ್ಪ ತರಚು ಗಾಯಗಳಾಗಿವೆ ಅಷ್ಟೇ. ಉಳಿದಂತೆ ಐ ಯಾಮ್ ಫೈನ್ ಎಂದು ಹೇಳಿದ್ದಾರೆ.

ಇನ್ನು ಶೂಟಿಂಗ್ ವೇಳೆ ರಜನಿಕಾಂತ್ ಅವರು ಗಾಯಗೊಂಡಿದ್ದಾರೆ ಎಂಬ ಸುದ್ದಿಯನ್ನು ಬಂಡೀಪುರ ರಕ್ಷಿತಾರಣ್ಯದ ಅಧಿಕಾರಿಗಳೂ ಸಹ ಅಲ್ಲಗಳೆದಿದ್ದಾರೆ. ಸ್ಕ್ರೀನ್ ಪ್ಲೇಯಲ್ಲಿದ್ದಂತೆ ರಜನಿ ಅವರು ಬೀಳುವ ದೃಶ್ಯವಿತ್ತು. ಆ ರೀತಿಯಾಗಿ ರಜನಿ ಹಗ್ಗದಿಂದ ಕೆಳಗೆ ಜಾರುವ ವೇಳೆಯಲ್ಲಿ ಅವರು ಸೂಚನೆಯಂತೇ ಬೀಳುತ್ತಾರೆ. ಆ ವೇಳೆ ಅಲ್ಲಿದ್ದವರೆಲ್ಲರೂ ಅವರಲ್ಲಿಗೆ ಧಾವಿಸುತ್ತಾರೆ. ಇದೆಲ್ಲವೂ ಪೂರ್ವನಿರ್ಧಾರಿತವಾಗಿತ್ತು. ಆ ಬಳಿಕ ರಜನಿಕಾಂತ್ ಅವರು ಸಾವರಿಸಿಕೊಂಡು ಎದ್ದು ನಿಂತರು. ಶೂಟಿಂಗ್ ಮುಗಿಸಿ ಚೆನ್ನೈಗೆ ವಾಪಾಸು ತೆರಳಿದ್ದಾರೆ ಎಂದು ಸ್ಥಳದಲ್ಲಿ ಹಾಜರಿದ್ದ ಅರಣ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.

ಸಾಹಸ ಕಾರ್ಯಕ್ರಮದಲ್ಲಿ ಬೇರ್ ಗ್ರಿಲ್ ಜೊತೆ ಕಾಣಿಸಿಕೊಳ್ಳುತ್ತಿರುವ ಎರಡನೇ ಭಾರತೀಯ ರಜನಿಕಾಂತ್ ಆಗಿದ್ದಾರೆ. ಈ ಮೊದಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಈ ಕಾರ್ಯಕ್ರಮದಲ್ಲಿ ಕಾಣಿಸಿದ್ದರು.

Trending

To Top