Food

ಗರಿಗರಿಯಾದ ಸ್ವೀಟ್ ಶಂಕರ್ ಪಾಳಿ ಮಾಡುವ ವಿಧಾನ

ಮನೆಯಲ್ಲಿರುವ ಮಕ್ಕಳಿಗೆ ಎಷ್ಟೇ ತಿಂಡಿಗಳನ್ನು ಮಾಡಿಕೊಟ್ಟರೂ ಕಡಿಮೆಯೇ. ಮಕ್ಕಳು ಖುಷಿಯಾಗಿ ತಿನ್ನುವುದನ್ನು ನೋಡುವುದೇ ತಾಯಿಯರಿಗೆ ಹಿರಿಯರಿಗೆ ಖುಷಿ. ಹೀಗೆ ಮಕ್ಕಳಿಗಾಗಿ ಇರುವ ಸಿಹಿ ತಿಂಡಿ ಶಂಕರ್ ಪಾಳಿಯನ್ನು ಮನೆಯಲ್ಲೇ ತಯಾರಿಸಿ ನೀಡಿ..

ಬೇಕಾಗುವ ಸಾಮಗ್ರಿಗಳು :
1. 1 ಕಪ್ ಮೈದಾ ಅಥವಾ ಗೋಧಿ ಹಿಟ್ಟು
2. 3/4 ಕಪ್ ಪುಡಿ ಮಾಡಿದ ಸಕ್ಕರೆ.
3. 3/4 ಕಪ್ ಹಾಲು

ಮಾಡುವ ವಿಧಾನ :
ಸಕ್ಕರೆ ಪುಡಿಯನ್ನು ಉಗುರು ಬೆಚ್ಚಗಿನ ನೀರಲ್ಲಿ ಕರಗಿಸಿ, ತಣ್ಣಗಾಗಲು ಇಡಿ. ಈ ನೀರು ಸಕ್ಕರೆಯ ಮಿಶ್ರಣಕ್ಕೆ ಮೈದಾ ಸೇರಿಸಿ ಕಲಸಿ. ಅದನ್ನು 20 ನಿಮಿಷ ಇಡಿ.

20 ನಿಮಿಷದ ನಂತರ ಕಲಸಿದ ಹಿಟ್ಟನ್ನು ಸ್ವಲ್ಪ ತೆಗೆದುಕೊಂಡು, ದಪ್ಪವಾದ ಹಾಳೆಗಳ ಆಕಾರದಲ್ಲಿ ಲಟ್ಟಿಸಿ. ಕರಿದ ನಂತರ ಆಕಾರದ ಗಾತ್ರ ಹೆಚ್ಚುವುದರಿಂದ ದಪ್ಪ ಹಾಳೆಯ ಹಾಗೆ ಇರಬೇಕು.

ನಂತರ ಡೈಮಂಡ್ ಅಥವಾ ಚೌಕಾಕಾರದಲ್ಲಿ ಕತ್ತರಿಸಿ ಇಟ್ಟುಕೊಳ್ಳಿ. ನಂತರ ಒಂದು ಪ್ಯಾನ್ ಗೆ ಎಣ್ಣೆ ಹಾಕಿ ಬಿಸಿ ಮಾಡಿ, ತೀರಾ ಬಿಸಿ ಆಗಬಾರದು. ಎಣ್ಣೆ ಬಿಸಿ ಆದ ಕೂಡಲೆ ಫ್ಲೇಮ್ ಅನ್ನು ಸಿಮ್ ನಲ್ಲಿ ಇಡಿ. ಸಂಪೂರ್ಣ ಪ್ರಕ್ರಿಯೆ ಕಡಿಮೆ ಉರಿಯಲ್ಲೇ ನಡೆಯಬೇಕು.

ಕಟ್ ಮಾಡಿರುವ ಶಂಕರಪಾಳಿ ಪೀಸ್ ಗಳು ಹೊಂಬಣ್ಣಕ್ಕೆ ತಿರುಗುವ ವರೆಗೂ ಡೀಪ್ ಫ್ರೈ ಮಾಡಿ. ಗರಿಗರಿಯಾದ ಶಂಕರ್ ಪಾಳಿ ಸವಿಯಿರಿ.

Trending

To Top