Food

ಗರಿಗರಿಯಾದ ಚಕ್ಕುಲಿ ತಯಾರಿಸುವ ವಿಧಾನ

ಚಕ್ಕುಲಿ ಎಲ್ಲರೂ ಇಷ್ಟಪಡುವ ತಿಂಡಿ. ಇದನ್ನು ತಯಾರಿಸುವ ವಿಧಾನ…

ಬೇಕಾಗುವ ಸಾಮಗ್ರಿಗಳು :
1) ಅಕ್ಕಿ ಹಿಟ್ಟು :- 2 ಕಪ್
2) ಹುರಿದ ಕಡಲೆ ಬೇಳೆ :- 1/2 ಕಪ್
3) ಉಪ್ಪು
4) ಜೀರಿಗೆ
5) ಆಜ್ವೈನ್
6) ಎಳ್ಳು

ಮಾಡುವ ವಿಧಾನ :- ಒಂದು ಬೌಲ್ ತೆಗೆದುಕೊಂಡು ಅದರಲ್ಲಿ ಅಕ್ಕಿ ಹಿಟ್ಟು ಮತ್ತು ಹುರಿದ ಕಡಲೆ ಹಿಟ್ಟು, ಈ ಮಿಶ್ರಣಕ್ಕೆ ಸ್ವಲ್ಪ ಬಿಸಿ ಮಾಡಿದ ಎಣ್ಣೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ನಂತರ ಜೀರಿಗೆ, ಆಜ್ವೈನ್ ಮತ್ತು ಎಳ್ಳನ್ನು ಸೇರಿಸಿ. ಖಾರ ಇಷ್ಟಪಡುವವರು ಕೆಂಪು ಮೆಣಸಿನಕಾಯಿ ಪುಡಿ ಸೇರಿಸಿ. ಎಲ್ಲವನ್ನು ಚೆನ್ನಾಗಿ ಕಲಸಿ.

ಚಕ್ಕುಲಿ ತಯಾರಿಸುವ ಸಾಧನಕ್ಕೆ ತಯಾರಿಸಿದ ಹಿಟ್ಟನ್ನು ತುಂಬಿಸಿ, ಹೊಂಬಣ್ಣ ಬರುವವರೆಗೂ ಫ್ರೈ ಮಾಡಿ.

ರುಚಿಯಾದ ಶುಚಿಯಾದ ಗರಿಗರಿಯಾದ ಚಕ್ಕುಲಿ ಸವಿಯಲು ಸಿದ್ಧ.

ರೆಸಿಪಿ ಕ್ರೆಡಿಟ್ಸ್ : ಡಾ.ನೇತ್ರ.ಎನ್.ಎಸ್

Trending

To Top