gossip

ಗಟ್ಟಿಮೇಳ ಹಾಗೂ ಜೊತೆ ಜೊತೆಯಲಿ ಸೀರಿಯಲ್ ನಡುವೆ ಬಾರಿ ಜಗಳ! ಯಾಕೆ ಗೊತ್ತಾ? ನೀವೇ ನೋಡಿ

ಗಟ್ಟಿಮೇಳ ಹಾಗೂ ಜೊತೆ ಜೊತೆಯಲಿ ಸೀರಿಯಲ್ ನಡುವೆ ಬಾರಿ ಜಗಳ! ಯಾಕೆ ಗೊತ್ತಾ? ನೀವೇ ನೋಡಿ

ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಿಗಿಂತ ಭಾರಿ ಸದ್ದು ಮಾಡುತ್ತಿರುವುದು ಸೀರಿಯಲ್ಗಳು ಎಂದರೆ ತಪ್ಪಾಗಲಾರದು. ಸಂಜೆ ಆಯ್ತು ಅಂದ್ರೆ ಸಾಕು ಮನೆಮಂದಿಯಲ್ಲಾ ಕುಳಿತುಬಿಡುತ್ತಾರೆ ಅಷ್ಟೊಂದು ಹುಚ್ಚು ಹಿಡಿಸು ಬಿಟ್ಟಿವೆ ಈ ಸೀರಿಯಲ್ ಗಳು. ಅಂತಹ ಸೀರಿಯಲ್ ಗಳಲ್ಲಿ ಗಟ್ಟಿಮೇಳ ಹಾಗೂ ಜೊತೆ ಜೊತೆಯಲಿ ಧಾರವಾಹಿಗಳು ಭಾರಿ ಸದ್ದು ಮಾಡುತ್ತಿವೆ. ಆರ್ಯವರ್ಧನ್ ಹಾಗೂ ಅನುಶ್ರೀ ಅಭಿನಯದ ಜೊತೆ ಜೊತೆಯಲಿ ಸೀರಿಯಲ್ ಹಾಗೂ ವೇದಾಂತ ಮತ್ತು ಅಮೂಲ್ಯ ಅಭಿನಯದ ಗಟ್ಟಿಮೇಳ ಸೀರಿಯಲ್. ಈ ಎರಡು ಸೀರಿಯಲ್ ಗಳಿಗೆ ಟಿ.ಆರ್.ಪಿ. ವಿಷಯದಲ್ಲಿ ಸಾಕಷ್ಟು ಜಿದ್ದಾಜಿದ್ದಿ ಏರ್ಪಟ್ಟಿದೆ. ಅದೇನು ಅಂತ ಸಂಪೂರ್ಣವಾಗಿ ಈ ಲೇಖನದಲ್ಲಿ ತಿಳಿಸುತ್ತೇವೆ ಬನ್ನಿ….

ಜನಮನ ಗೆದ್ದು ಸಾಗುತ್ತಿರುವ ಈ ಎರಡು ಧಾರವಾಹಿಗಳಲ್ಲಿ ಮೊದಮೊದಲು ಗಟ್ಟಿಮೇಳ ಸೀರಿಯಲ್ ಟಿ.ಆರ್.ಪಿ ಯಲ್ಲಿ ನಂಬರ್1 ಸ್ಥಾನದಲ್ಲಿದ್ದರೆ, ನಂತರ ಜೊತೆ ಜೊತೆಯಲಿ ಸೀರಿಯಲ್ ಎಲ್ಲ ವರ್ಗದ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಂಡು 14.4 ಟಿ.ಆರ್.ಪಿ ಪಡೆದುಕೊಂಡು ದಾಖಲೆ ನಿರ್ಮಿಸಿತ್ತು. ಈಗ ಗಟ್ಟಿಮೇಳ 52ನೇ ವಾರದ ರೇಟಿಂಗ್ ನೋಡುವುದಾದರೆ ಎರಡು ಧಾರವಾಹಿಗಳು ಸಹ ನಾನು-ನೀನು ಎಂಬಂತೆ ಕೂದಲೆಳೆಯ ಅಂತರದಲ್ಲಿ ಮೊದಲ ಹಾಗೂ ಎರಡನೇ ಸ್ಥಾನ ಪಡೆದುಕೊಂಡಿದೆ. ಎರಡು ಸೀರಿಯಲ್ಗಳಿಗೆ ಸಾಕಷ್ಟು ಅಭಿಮಾನಿಗಳಿದ್ದು, ಒಂದು ದಿನವೂ ಕೂಡ ಮಿಸ್ ಮಾಡದೆ ಧಾರವಾಹಿಯನ್ನು ನೋಡುತ್ತಾರೆ. ನೀವು ಸಹ ಸೀರಿಯಲ್ ಅಭಿಮಾನಿಗಳು ಆಗಿದ್ದರೆ ಗಟ್ಟಿಮೇಳ ಹಾಗೂ ಜೊತೆ ಜೊತೆಯಲಿ ಧಾರವಾಹಿಗಳಲ್ಲಿ ಯಾವುದು ಬೆಸ್ಟ್ ಎಂದು ಕಾಮೆಂಟ್ ಮಾಡಿ…..

Trending

To Top