Film News

ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ನಟಿ ನಿಶಾ ಮಿಲನ್ ಹೆಸರಿನಲ್ಲಿ ಮೋಸ !

ಜೀ ಕನ್ನಡ ಧಾರಾವಾಹಿಯ ಪ್ರತಿಷ್ಠಿತ ಧಾರಾವಾಹಿ ಗಟ್ಟಿಮೇಳ , ಈ ಧಾರಾವಾಹಿಯ ನಾಯಕಿ ಅಮೂಲ್ಯ ಪಾತ್ರಧಾರಿ ನಿಶಾ ಯಾರಿಗೆ ಗೊತ್ತಿಲ್ಲ … ಈಕೆ ಎಲ್ಲರಿಗೂ ಅಚ್ಚುಮೆಚ್ಚು. ವೇದಾಂತ್ ಮತ್ತು ಅಮೂಲ್ಯ ಜಗಳ ನೋಡುವ ಸಲುವಾಗಿಯೇ ಗಟ್ಟಿಮೇಳ ಧಾರಾವಾಹಿ ನೋಡುವ ಜನರೂ ಸಹ ಇದಾರೆ.

ಧಾರಾವಾಹಿಯಲ್ಲಿ ನಟಿಸುವ ಎಲ್ಲಾ ನಟ ನಟಿಯರಿಗೂ ಸಾಮಾನ್ಯವಾಗಿ ಸೋಷಿಯಲ್ ಮೀಡಿಯಾ ಅಕೌಂಟ್ ಇದ್ದೇ ಇರುತ್ತದೆ. ಮತ್ತು ಹಲವಾರು ಅಭಿಮಾನಿಗಳೂ ಸಹ ಇರುತ್ತಾರೆ.

ಇದೀಗ ಗಟ್ಟಿಮೇಳ ಧಾರಾವಾಹಿಯ ಅಮೂಲ್ಯ ಪಾತ್ರಧಾರಿಗೆ ಸಾಮಾಜಿಕ ಜಾಲತಾಣದ ಮೂಲಕ ಒಂದು ಬೇಸರದ ಸಂಗತಿ ನಡೆದಿದೆ. ನಿಶಾ ಮಿಲನ ಹೆಸರಿನಲ್ಲಿ ಕೆಲವರು ಹಣ ಸಂಗ್ರಹಿಸಿ ವಂಚನೆ ಮಾಡುತ್ತಿದ್ದಾರೆ. ನಾನು ಯಾರಿಗೂ ಹಣ ಸಂಗ್ರಹಿಸಲು ಸೂಚನೆ ಕೊಟ್ಟಿಲ್ಲ. ನನ್ನ ಹೆಸರು ದುರ್ಬಳಕೆ ಮಾಡಲಾಗುತ್ತಿದೆ ಎಂದು ನಟಿ ನಿಶಾ ಮಿಲನ್ ಬೇಸರ ವ್ಯಕ್ತಪಡಿಸಿದ್ದಾರೆ.

Trending

To Top