Kannada Updates
Kannada Serials

ಗಟ್ಟಿಮೇಳ ಧಾರಾವಾಹಿಯಲ್ಲಿ ಚಿನ್ನಾರಿಮುತ್ತ

ರಿಯಾಲಿಟಿ ಶೋಗಳಲ್ಲಂತೂ ಸ್ಟಾರ್‌ ಕಲಾವಿದರದ್ದೇ ದರ್ಬಾರು. ‘ಜೀ ಕನ್ನಡ’ ವಾಹಿನಿಯ ಡ್ರಾಮಾ ಜ್ಯೂನಿಯರ್ಸ್‌ ಕಾರ್ಯಕ್ರಮದಲ್ಲಿ ನಿರ್ಣಾಯಕರಾಗಿ ವಿಜಯ್‌ ರಾಘವೇಂದ್ರ ಪಾಲ್ಗೊಂಡಿದ್ದರು. ಈಗ ಅವರು ಅದೇ ಚಾನಲ್‌ನ ‘ಗಟ್ಟಿಮೇಳ’ ಧಾರಾವಾಹಿಯಲ್ಲಿ ನಟಿಸಿದ್ದಾರೆ.

‘ಗಟ್ಟಿಮೇಳ’ಕ್ಕೆ ವಿಜಯ್‌ ರಾಘವೇಂದ್ರ ಎಂಟ್ರಿ ನೀಡಿದ್ದಾರೆ ಎಂದ ಮಾತ್ರಕ್ಕೆ ಅವರು ಫುಲ್‌ಟೈಮ್‌ ಅದರಲ್ಲೇ ಅಭಿನಯಿಸುತ್ತಾರೆ ಎಂದೇನಿಲ್ಲ. ಎರಡು ವಿಶೇಷ ಎಪಿಸೋಡ್‌ಗಳಲ್ಲಿ ಅವರು ಕಾಣಿಸಿಕೊಳ್ಳುತ್ತಾರೆ. ಫೆ. 10 ಮತ್ತು 11ರಂದು ಆ ಸಂಚಿಕೆಗಳು ಪ್ರಸಾರ ಆಗಲಿವೆ. ವಿಶೇಷವೆಂದರೆ ಈ ಧಾರಾವಾಹಿಯಲ್ಲಿ ಅವರು ಯಾವುದೋ ಕಾಲ್ಪನಿಕ ಪಾತ್ರಕ್ಕೆ ಬಣ್ಣ ಹಚ್ಚಿಲ್ಲ. ಬದಲಿಗೆ, ಸ್ವತಃ ಚಿತ್ರನಟ ವಿಜಯ್‌ ರಾಘವಂದ್ರ ಆಗಿಯೇ ಕಾಣಿಸಿಕೊಂಡಿದ್ದಾರೆ.

‘ಗಟ್ಟಿಮೇಳ’ ಧಾರಾವಾಹಿ ಕಥಾನಾಯಕಿ ಅಮೂಲ್ಯಾಳಿಗೆ ವಿಜಯ್‌ ರಾಘವೇಂದ್ರ ಎಂದರೆ ಅಪಾರ ಅಭಿಮಾನ. ಅವಳ ಆಸೆಯನ್ನು ಅರ್ಥ ಮಾಡಿಕೊಂಡ ಕಥಾನಾಯಕ ವೇದಾಂತ್‌, ತನ್ನ ಮನೆಗೆ ವಿಜಯ್‌ ರಾಘವೇಂದ್ರರನ್ನು ಆಹ್ವಾನಿಸುತ್ತಾನೆ. ಈ ವಿಶೇಷ ಸನ್ನಿವೇಶದಲ್ಲಿ ‘ಚಿನ್ನಾರಿ ಮುತ್ತ’ ಬಂದು ಹೋಗುತ್ತಾರೆ. ಇಂಥ ಹಲವು ವಿಶೇಷತೆಗಳಿಂದಾಗಿ ಈ ಧಾರಾವಾಹಿ ವೀಕ್ಷಕರನ್ನ ಸೆಳೆದುಕೊಳ್ಳುತ್ತಿದೆ.

‘ಗಟ್ಟಿಮೇಳ’ ಕಥೆಯಲ್ಲಿ ಈ ದೃಶ್ಯ ಹೈಲೈಟ್‌ ಆಗಲಿದೆ. ವೇದಾಂತ್ ಮತ್ತು ಅಮೂಲ್ಯ ಪರಸ್ಪರ ತಮ್ಮ ಪ್ರೀತಿಯನ್ನು ಅರ್ಥ ಮಾಡಿಕೊಳ್ಳಲು ವಿಜಯ್‌ ರಾಘವೇಂದ್ರ ಸಹಾಯ ಮಾಡುತ್ತಾರೆ. ಈ ಭೇಟಿಯಿಂದ ಅಮೂಲ್ಯ ಸಖತ್‌ ಖುಷಿ ಆಗುತ್ತಾಳೆ. ‘ಚಿನ್ನಾರಿ ಮುತ್ತ’ ಯಾವ ಗೆಟಪ್‌ನಲ್ಲಿ ಬಂದಿದ್ದರು, ಅವರಿಗೆ ಯಾವ ರೀತಿ ಸ್ವಾಗತ ದೊರೆಯಿತು ಎಂಬುದನ್ನು ಫೆ. 10 ಮತ್ತು 11ರ ಎಪಿಸೋಡ್‌ಗಳಲ್ಲಿ ವೀಕ್ಷಕರು ಕಣ್ತುಂಬಿಕೊಳ್ಳಬಹುದು. 

Related posts

ಜೊತೆಜೊತೆಯಲಿ ಧಾರಾವಾಹಿಯಲ್ಲಿ ಆರ್ಯವರ್ಧನ್-ಅನು ಸಿರಿಮನೆ ಸಿನಿಮಾ ರೀತಿಯ ಲ#ವ್ ಸೀನ್! ವಿಡಿಯೋ ನೋಡಿ

webadmin

ನನಗೆ ತೆಲುಗು ಚಿತ್ರರಂಗ ಕಾಯುತ್ತಾ ಇದೆ ಎಂದ ಟಿಕ್ ಟಾಕ್ ಸ್ಟಾರ್ ಸೋನು ಶ್ರೀನಿವಾಸ್ ಗೌಡ! ವಿಡಿಯೋ ನೋಡಿ

webadmin

ಸಿಲ್ಲಿ ಲಲ್ಲಿ ಖ್ಯಾತಿಯ NML ನಮಿತಾ ರಾವ್, ಈಗ ಎಲ್ಲಿದ್ದಾರೆ, ಹೇಗ್ ಇದ್ದಾರೆ, ಏನು ಮಾಡ್ತಾ ಇದ್ದಾರೆ ನೋಡಿ!

webadmin

ಪ್ರಧಾನಿ ಮೋದಿಗೆ ಪತ್ರ ಬರೆದ ನಟ ಅನಿರುದ್ಧ್!

Pooja Siddaraj

ಇಂದಿನಿಂದ ಹೊಚ್ಚ ಹೊಸ ಕನ್ನಡ ಧಾರಾವಾಹಿ ‘ಸೀತೆಯ ರಾಮ’ ಶುರು ಆಗಲಿದೆ! ವಿಡಿಯೋ ನೋಡಿ

webadmin

ಡ್ರಾಮಾ ಜೂನಿಯರ್ಸ್ ಪುಟಾಣಿ ಮಹತಿ ವೈಷ್ಣವಿ ಭಟ್ ಈಗ ಹೇಗಿದ್ದಾರೆ, ಏನ್ ಮಾಡ್ತಾ ಇದ್ದಾರೆ ನೋಡಿ!

webadmin

ಅನಿರುಧ್, ಮೇಘ ಶೆಟ್ಟಿ ಧಾರಾವಾಹಿ ಜೊತೆ ಜೊತೆಯಲಿ ಚಿತ್ರೀಕರಣ ಹೇಗಿರುತ್ತೆ ಗೊತ್ತಾ! ಈ ವಿಡಿಯೋ ನೋಡಿ

webadmin

ಲಂಡನ್ನಿಗೆ ಹೋಗುತ್ತೇನೆಂದು ನಟ ಅನಿರುದ್ಧ್ ಹೋಗಿದ್ದು ಎಲ್ಲಿಗೆ ?

Pooja Siddaraj

ಜೊತೆಜೊತೆಯಲಿ ಧಾರಾವಾಹಿ ಅನಿರುಧ್ ಅವರಿಗೆ ಒಂದು ದಿನಕ್ಕೆ ಎಷ್ಟು ಸಂಭಾವನೆ ಗೊತ್ತಾ!

webadmin

ನಾಟಕ ಅಲ್ಲ, ನಿಜವಾಯ್ತು ವೇದಾಂತ್ – ಅಮೂಲ್ಯ ನಡುವಿನ ಪ್ರೀತಿ

Pooja Siddaraj

ಮನೆಗೆ ಪುಟಾಣಿ ಲಕ್ಷ್ಮಿಯನ್ನು ಬರ ಮಾಡಿಕೊಂಡ ‘ರಾಧಾ ರಮಣ’ ಸ್ಕಂದ ಅಶೋಕ! ಸುಂದರ ಫೋಟೋಗಳನ್ನು ನೋಡಿ

webadmin

ಜೊತೆ ಜೊತೆಯಲಿ ಧಾರಾವಾಹಿ ಅನು ಸಿರಿಮನೆ- ಮೇಘ ಶೆಟ್ಟಿ ಅವರ ಸಕತ್ ಟಿಕ್ ಟಾಕ್ ವೀಡಿಯೋಸ್ ನೋಡಿ!

webadmin