gossip

ಗಂಡ ಶಾರುಖ್ ಕುರಿತ ಸತ್ಯವೊಂದನ್ನು ಬಿಚ್ಚಿಟ್ಟ ಗೌರಿ ಖಾನ್

ಬಾಲಿವುಡ್ನ ಮೋಸ್ಟ್ ಹ್ಯಾಪನಿಂಗ್ ಹಾಗೂ ಸದಾ ಸುದ್ದಿಯಲ್ಲಿರುವ ಸೆಲೆಬ್ರಿಟಿ ಜೋಡಿಗಳಲ್ಲಿ ಗೌರಿ-ಶಾರುಖ್ ಸಹ ಒಂದು. ಪ್ರೀತಿಸಿದ ಹುಡುಗಿಗಾಗಿ ಕಷ್ಟಪಟ್ಟು ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ರಿಯಲ್ ಪ್ರೇಮಿ ಶಾರುಖ್.
ಈ ಜೋಡಿ ಎಲ್ಲೆ ಕಾಣಿಸಿಕೊಂಡರೂ ಅವರ ನಡುವಿನ ಅನೋನ್ಯತೆ ಎದ್ದು ಕಾಣುತ್ತದೆ. ಸದಾ ನಗುತ್ತಾ ಕಾಣಿಸಿಕೊಳ್ಳುವ ಶಾರುಖ್ ಹಾಗೂ ಗೌರಿ ಬಗ್ಗೆ ಅವರ ಅಭಿಮಾನಿಗಳಿಗೆ ಸಾಕಷ್ಟು ಮಾಹಿತಿ ಇದೆ. ಆದರೆ ಈ ಸಲ ಗೌರಿ ಸಾರ್ವಜನಿಕ ವೇದಿಕೆಯಲ್ಲಿ ಗಂಡ ಶಾರುಖ್ ಕುರಿತಾದ ಸತ್ಯವೊಂದನ್ನು ಬಾಯಿಬಿಟ್ಟಿದ್ದಾರೆ.
ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದರ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಗೌರಿ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.
ಈ ವೇಳೆ ಪತಿ ಶಾರುಖ್ ಹೊರಗಡೆ ಹೋಗಲು ರೆಡಿ ಆಗಲು ಎಷ್ಟು ಸಮಯ ತೆಗೆದುಕೊಳ್ಳುತ್ತಾರೆ ಎಂದು ಬಹಿರಂಗಪಡಿಸಿದ್ದಾರೆ.
‘ನಾನು ಸಿದ್ಧವಾಗಲು 5 ನಿಮಿಷ ತೆಗೆದುಕೊಂಡರೆ, ಶಾರುಖ್ 5 ಗಂಟೆ ತೆಗೆದುಕೊಳ್ಳುತ್ತಾರೆ. ಅವರು ಸಿದ್ಧವಾಗಲು ಒಂದು ದೊಡ್ಡ ರೂಮ್ ಇದೆ. ಅದರ ತುಂಬೆಲ್ಲ ವಾಡ್ಡ್ರೋಬ್ಗಳೇ ಇವೆ’ ಎಂದಿದ್ದಾರೆ ಗೌರಿ.
ಇದಕ್ಕೆ ಪ್ರತಿಕ್ರಿಯಿಸಿದ ಶಾರುಖ್, ‘ನಾನು ಎಲ್ಲಿ ಹೋದರೂ ಒಂದೇ ರೀತಿಯ ಬಟ್ಟೆಗಳನ್ನು ತೊಡುತ್ತೇನೆ. ಅದು ಕಪ್ಪು ಬಣ್ಣದ ಸೂಟ್. ಅದರಲ್ಲಿ ಯಾವ ವ್ಯತ್ಯಾಸವೂ ಕಾಣುವುದಿಲ್ಲ’ ಎಂದಿದ್ದಾರೆ.

Trending

To Top