ಬಾಲಿವುಡ್ ಗೆ ಎನ್ ಸಿ ಬಿ ಅಧಿಕಾರಿಗಳು ಎಂದರೆ ಬಹಳ ಭಯ. ಎನ್ ಸಿ ಬಿ ಅವರು ಬಾಲಿವುಡ್ ನ ದೊಡ್ಡ ದೊಡ್ಡ ಸ್ಟಾರ್ ಗಳಿಗೆ ಆಘಾತವನ್ನ ನೀಡಿದ್ದಾರೆ. ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಸಲ್ಮಾನ್ ಖಾನ್, ಹೀಗೆ ಹಲವಾರು ನಟ ನಟಿಯರು ಎನ್ ಸಿ ಬಿ ಯಿಂದಾಗಿ ಸಂಕಷ್ಟಕ್ಕೆ ಸಿಲುಕಿದರು. ನಟ ನಟಿಯರಿಗೆ ಎನ್ ಸಿ ಬಿ ಮೇಲಿರುವ ಭಯವನ್ನೇ ಬಂಡವಾಳ ಮಾಡಿಕೊಂಡು ಕೆಲವು ದುರುಳರು ನಟಿಯೊಬ್ಬರನ್ನ ಬೆದರಿಸಿರುವ ಕಾರಣ ನಟಿಯು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮುಂಬೈನಲ್ಲಿ ನೆಲಸಿದ್ದ ಬೊಜಾಪುರಿ ನಟಿ ಮುಂಬೈನಲ್ಲಿ ತಮ್ಮ ಸ್ನೇಹಿತರೊಂದಿಗೆ ಒಂದು ಹೈಷಾರಾಮಿ ಹೋಟೆಲ್ ಗೆ ಹೋಗಿದ್ದರು. ಅಲ್ಲಿ ಗೆಳೆಯರೊಂದಿಗೆ ಇರುವಾಗ ಇಬ್ಬರು ಆಗಂತಕರು ತಾವು ಎನ್ ಸಿ ಬಿ ಅಧಿಕಾರಿಗಳು ಎಂದು ಹೇಳಿಕೊಂಡು ಅವರನ್ನ ರೈಡ್ ಮಾಡಿದರು. ಪ್ರಕರಣದಲ್ಲಿ ಸಿಲುಕಬಾರದು ಎಂದರೆ 40 ಲಕ್ಷ ಹಣ ಕೊಡಿ ಎಂದು ಒತ್ತಾಯಿಸಿದ್ದಾರೆ. ನಟಿಯು ಮಾನಕ್ಕೆ ಎದುರಿ 20 ಲಕ್ಷ ಹಣ ನೀಡಿದ್ದು, ಆ ನಕಲಿ ಅಧಿಕಾರಿಗಳು ಇನ್ನು 20 ಲಕ್ಷ ಹಣ ನೀಡುವಂತೆ ಪೀಡಿಸಿದ್ದಾರೆ.
ಹಣ ಹೊಂದಿಸಲಾಗದೆ ನಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು ತನಿಖೆ ನಡೆಸಿ ಆ ನಕಲಿ ಎನ್ ಸಿ ಬಿ ಅಧಿಕಾರಿಗಳನ್ನ ಮತ್ತು ನಟಿಯ ಆ ಇಬ್ಬರು ಗೆಳೆಯರನ್ನ ಬಂಧಿಸಿದ್ದಾರೆ. ಅಂದು ಪಾರ್ಟಿಗೆ ಹೋಗಿದ್ದ ಆ ನಟಿಯ ಇಬ್ಬರು ಗೆಳೆಯರು ಕೂಡ ಇದರಲ್ಲಿ ಶಾಮೀಲು ಆಗಿದ್ದರು ಎನ್ನಲಾಗಿದೆ.