gossip

ಖಾನ್ ಕುಟುಂಬಕ್ಕೆ ಮತ್ತೊಂದು ಕುಡಿ; ತೈಮೂರ್‌ ಈಗ ಬಿಗ್‌ ಬ್ರದರ್?

ಬಾಲಿವುಡ್ ಬೆಬೋ ಕರೀನಾ ಕಪೂರ್ ಹಾಗೂ ಕಿಯಾರಾ ಅಡ್ವಾಣಿ ‘ಗುಡ್‌ ನ್ಯೂಸ್’ ನೀಡಲು ರೆಡಿಯಾಗಿದ್ದಾರೆ. ಅರೇ, ಕರೀನಾ ಮತ್ತೊಮ್ಮೆ ಗರ್ಭಿಣಿಯಾಗಿದ್ದಾರಾ? ಹೌದು! ‘ಗುಡ್‌ ನ್ಯೂಸ್’ ಎನ್ನುವ ಸಿನಿಮಾದಲ್ಲಿ ಗರ್ಭಿಣಿಯಾಗಿದ್ದಾರೆ.
ಕಿಯಾರಾ ಅಡ್ವಾನಿ, ಕರೀನಾ ಕಪೂರ್ ಪ್ರಗ್ನೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರತಂಡ ಪ್ರಮೋಶನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಂದರ್ಭದಲ್ಲಿ ಕರೀನಾಗೆ ‘ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದೀರಾ? ಎಂದು ಪ್ರಶ್ನಿಸಿದಾಗ ಕರೀನಾ ಕೊಟ್ಟ ಉತ್ತರ ಹೀಗಿದೆ.

ಸದ್ಯಕ್ಕೇನು ಪ್ಲಾನ್ ಇಲ್ಲ. ನಾನು, ಸೈಫ್ ಇಬ್ಬರೂ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದೇವೆ. ಹೀಗಾಗಿ ಆ ಬಗ್ಗೆ ಇನ್ನೂ ಆಲೋಚಿಸಿಲ್ಲ’ ಎಂದಿದ್ದಾರೆ.
ಕರೀನಾ ಕಪೂರ್, ಕಿಯಾರಾ ಅಡ್ವಾನಿ, ಅಕ್ಷಯ್ ಕುಮಾರ್ ಕಾಂಬಿನೇಶನ್‌ನಲ್ಲಿ ‘ಗುಡ್‌ನ್ಯೂಸ್’ ಎನ್ನುವ ಸಿನಿಮಾವೊಂದು ಬರುತ್ತಿದೆ. ಕರೀನಾ ಹಾಗೂ ಕಿಯಾರಾ ಪ್ರಗ್ನೆಂಟ್ ಆಗಿ ನಟಿಸಿದ್ದಾರೆ. ಅಕ್ಷಯ್‌ ಕುಮಾರ್‌ಗೆ ಜೋಡಿಯಾಗಿ ಕರೀನಾ ನಟಿಸಿದರೆ ದಿಲ್ಜಿತ್‌ಗೆ ಜೋಡಿಯಾಗಿ ಕಿಯಾರಾ ನಟಿಸಿದ್ದಾರೆ. ಕಾಮಿಡಿ ಓರಿಯೆಂಟೆಡ್ ಚಿತ್ರ ಇದಾಗಿದೆ.

Trending

To Top