News

ಕೋವಿಡ್-19 ಪರೀಕ್ಷೆಗೆ ದರ ನಿಗಧಿ : ಇನ್ಮುಂದೆ ರೂ.2250 ಕೊಟ್ಟು, ರಾಜ್ಯದ ‘ಖಾಸಗೀ ಲಾಬ್’ಗಳಲ್ಲಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಬಹುದು.!

ಐಸಿಎಂಆರ್ ನಿಂದ ರಾಜ್ಯದಲ್ಲಿ ಮತ್ತೆ 10 ಕೋವಿಡ್-19 ಪರೀಕ್ಷೆ ನಡೆಸುವಂತ ಲ್ಯಾಬ್ ಗಳಿಗೆ ಅನುಮತಿಯನ್ನು ನೀಡಲಾಗಿದೆ. ಇದರಲ್ಲಿ 11 ಸರ್ಕಾರಿ, 5 ಖಾಸಗೀ ಲ್ಯಾಬ್ ಗಳಾಗಿವೆ. ಇಂತಹ ಲ್ಯಾಬ್ ಗಳಲ್ಲಿ ಸ್ವಯಂ ಪ್ರೇರಿತರಾಗಿ ಕೋವಿಡ್-19 ಪರೀಕ್ಷೆಗೆ ಒಳಪಡುವವರು ನಿಗಧಿಪಡಿಸಿರುವಂತ ರೂ.2250 ಹಣ ಪಾವತಿಸಬೇಕಾಗುತ್ತದೆ.

ಈ ಕುರಿತಂತೆ ಪತ್ರಿಕಾ ಪ್ರಕರಟಣೆ ಹೊರಡಿಸಿರುವ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಾದಂತ ಜಾವೇದ್ ಆಖ್ತರ್, ಐಸಿಎಂಆರ್ ನಿಂದ ರಾಜ್ಯದಲ್ಲಿ 16 ಹೊಸ ಕೋವಿಡ್-19 ಪರೀಕ್ಷೆಯನ್ನು ನಡೆಸುವಂತ ಲ್ಯಾಬ್ ಗೆ ಅನುಮತಿ ನೀಡಲಾಗಿದೆ. ಸರ್ಕಾರಿ 11 ಹಾಗೂ 5 ಖಾಸಗಿ ಲಾಬ್ಯ್ ಗಳನ್ನು ಸದ್ಯದಲ್ಲಿಯೇ ಆರಂಭಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಇನ್ನೂ ಶಂಕಿತರನ್ನು ರಾಜ್ಯ ಸರ್ಕಾರದಿಂದಲೇ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಇದರ ಹೊರತಾಗಿ ರಾಜ್ಯದ ಯಾವುದೇ ವ್ಯಕ್ತಿಗಳು ಕೊರೊನಾ ಪರೀಕ್ಷೆಗೆ ಒಳಗಾಗಬಹುದಾಗಿದೆ. ಇದಕ್ಕಾಗಿ ರೂ.2250 ಹಣ ನಿಗಧಿಪಡಿಸಲಾಗಿದೆ. ಈ ಹಣವನ್ನು ನೀಡಿ ಯಾರು ಬೇಕಾದರೂ ವೈಯಕ್ತಿಕವಾಗಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬಹುದು ಎಂಬುದಾಗಿ ತಿಳಿಸಿದ್ದಾರೆ.

Trending

To Top