Film News

ಕೊರೊನಾ ವೈರಸ್ ನಿಂದಾಗಿ ಮೊಟ್ಟ ಮೊದಲ ಬಾರಿಗೆ ಮಲಯಾಳಂ ಬಿಗ್ ಬಾಸ್-2 ಶೋ ಸ್ಥಗಿತಗೊಳಿಸಲಾಗಿದೆ

ಕೊರೋನಾವೈರಸ್ ಭೀತಿಯಿಂದಾಗಿ ಮಲಯಾಳಂನಲ್ಲಿ ಬಿಗ್ ಬಾಸ್ ಸೀಸನ್ 2 ಶೋ ಅರ್ಧದಲ್ಲಿಯೇ ರದ್ದಾಗಿದೆ. ಮನೆಯೊಳಗೆ ವೈರಸ್ ಹರಡುವ ಭೀತಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಕೊನೆಯ ಎಪಿಸೋಡ್ ನಾಳೆ ಪ್ರಸಾರವಾಗಲಿದ್ದು, ಅದಾದ ಬಳಿಕ ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ. ಸೂಪರ್ ಸ್ಟಾರ್ ಮೋಹನ್ ಲಾಲ್ ಮಲಯಾಳಂನಲ್ಲಿ ಶೋ ನಡೆಸುಕೊಡುತ್ತಾರೆ.

ಈಗಾಗಲೇ ಹೆಚ್ಚಿನ ಬಿಗ್ ಬಾಸ್ ಸ್ಪರ್ಧಿಗಳು ಮನೆಯಿಂದ ಹೊರನಡೆದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪ್ರೊಡಕ್ಷನ್ ಹೌಸ್ ನಿಂದಲೇ ಪ್ರಕಟಣೆ ಹೊರಡಿಸಲಾಗಿದೆ.

Trending

To Top