Film News

ಕೊರೊನಾ ವಿರುದ್ಧ ಹೋರಾಟಕ್ಕೆ ₹1.30 ಕೋಟಿ ನೀಡಿರುವ ಇಳಯ ದಳಪತಿ ವಿಜಯ್ ; ಕರ್ನಾಟಕ ಸಿಎಂ ಪರಿಹಾರ ನಿಧಿಗೂ ಸಹಾಯಧನ ನೀಡಿದ್ದಾರೆ !

ಕೊರೋನಾ ವೈರಸ್ ತಡೆಗಟ್ಟಲು ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳ ಫಂಡ್ ಗೆ ಹಲವಾರು ನಟ ನಟಿಯರು ಸಹಾಯಧನ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.. ಇದೀಗ ತಮಿಳು ಚಿತ್ರರಂಗದ ಸ್ಟಾರ್ ನಟ ದಳಪತಿ ವಿಜಯ್ ₹.1.30 ಕೋಟಿ ರೂಪಾಯಿ ಸಹಾಯಧನ ನೀಡಿದ್ದಾರೆ.

ಕೊರೋನಾ ಲಾಕ್ ಡೌನ್ ವೇಳೆಯಲ್ಲಿ ಬಡವರು, ದಿನಗೂಲಿ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಇದನ್ನು ಮನಗಂಡು ವಿಜಯ್ ಸಹಾಯ ಮಾಡಿದ್ದಾರೆ. . ಪಿಎಂ ಕೇರ್ಸ್ ಫಂಡ್ ಗೆ 25 ಲಕ್ಷ ರೂಪಾಯಿ ಹಾಗೂ ತಮಿಳುನಾಡು ಮುಖ್ಯಮಂತ್ರಿ ಪರಿಹಾರ ನಿಧಿಗೆ 50 ಲಕ್ಷ ಸಹಾಯಧನ ನೀಡಿದ್ದಾರೆ..

ಜೊತೆಗೆ ಕರ್ನಾಟಕ ಸೇರಿದಂತೆ ಉಳಿದ ರಾಜ್ಯಗಳ ಮುಖ್ಯಮಂತ್ರಿ ಪರಿಹಾರ ನಿಧಿಗೂ ವಿಜಯ್ ಸಹಾಯ ಮಾಡಿದ್ದಾರೆ. ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿಗೆ 10 ಲಕ್ಷ ರೂಪಾಯಿ, ಕರ್ನಾಟಕ, ತೆಲಂಗಾಣ, ಪಾಂಡಿಚೇರಿ ಮುಖ್ಯಮಂತ್ರಿ ಪರಿಹಾರ ನೀಧಿಗೆ ತಲಾ 5 ಲಕ್ಷದಂತೆ ಸಹಾಯಧನ ನೀಡಿದ್ದಾರೆ.

ಹಾಗೂ ಆಂಧ್ರ ಸಿಎಂ ಕೇರ್ಸ್ ಫಂಡ್ ಗೆ 2 ಲಕ್ಷ ರೂಪಾಯಿ ಮತ್ತು ದಕ್ಷಿಣ ಭಾರತದ ಸಿನಿ ರಂಗಕ್ಕೆ 25 ಲಕ್ಷ ರೂಪಾಯಿ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

Trending

To Top