Film News

ಕೊರೊನಾ ಮೇಲೆ ಆರ್.ಜಿ.ವಿ ಹಾಡು : ಪ್ರೊಮೋ ನೋಡಿಯೇ ವೈರಸ್ ಸತ್ತುಹೋಗುತ್ತೆ ಎಂದ ಅಭಿಮಾನಿಗಳು

ಟಾಲಿವುಡ್ ನಿರ್ದೇಶಕರಾದ ರಾಮ್ ಗೋಪಾಲ್ ವರ್ಮಾ ಯಾವಾಗಲೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುತ್ತಾರೆ. ತಮ್ಮ ಹಾಸ್ಯಭರಿತ ಸಂದೇಶಗಳ ಮೂಲಕ ಅಭಿಮಾನಿಗಳ್ಳನ್ನು ರಂಜಿಸುತ್ತಿರುತ್ತಾರೆ. ಈಗ ಲಾಕ್ ಡೌನ್ ಸಮಯವಾಗಿರುವುದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಇನ್ನೂ ಹೆಚ್ಚು ಸಕ್ರಿಯರಾಗಿರುತ್ತಾರೆ.

ರಾಮ್ ಗೋಪಾಲ್ ವರ್ಮಾ ವರ್ಮಾ ಎಲ್ಲಾ ಸಮಯದಲ್ಲೂ ಯಾವುದಾದರೊಂದು ವಿಷಯಕ್ಕೆ ಸುದ್ದಿಯಲ್ಲಿರುತ್ತಾರೆ. ಇದೀಗ ಲಾಕ್ ಡೌನ್ ನಲ್ಲಿ ಒಂದು ವಿಷಯಕ್ಕೆ ಸುದ್ದಿಯಲ್ಲಿದ್ದಾರೆ.

ಪ್ರಸ್ತುತ ಕೊರೊನಾ ವೈರಸ್ ಎಲ್ಲೆಡೆ ಸುದ್ದಿಯಲ್ಲಿದೆ. ಕೊರೊನಾ ವೈರಸ್ ಬಗ್ಗೆ ಹಾಡನ್ನು ಬರೆದಿರುವ ರಾಮ್ ಗೋಪಾಲ್ ವರ್ಮಾ, ಆ ಹಾಡನ್ನು ಇಂದು ಬಿಡುಗಡೆ ಮಾಡಿದ್ದಾರೆ. ಈ ಹಾಡು ಕೇಳುವವರು ಸ್ಯಾನಿಟೈಸರ್ನಿಂದ ಕೈ ತೊಳೆದುಕೊಂಡು ಕೇಳಿ ಎಂದು ಹ್ಯೂಮರಸ್ ಆಗಿ ಟ್ವೀಟ್ ಮಾಡಿದ್ದಾರೆ.
ಈ ಹಾಡಿನ ಕುರಿತಾಗಿ ಮತ್ತೊಂದು ಟ್ವೀಟ್ ಮಾಡಿರುವ ವರ್ಮಾ ಅವರು, ಹಾಡಿನ ಪ್ರೊಮೊವನ್ನು ಯೂಟ್ಯೂಬ್ನಲ್ಲಿ ಬಿಡುಗಡೆ ಮಾಡಿರುವುದಾಗಿ ಬರೆದುಕೊಂಡಿದ್ದಾರೆ.

ಈ ಪ್ರೊಮೋ ಟ್ರೆಂಡಿಂಗ್ ನಲ್ಲಿದ್ದು, ಪೂರ್ತಿ ಹಾಡು ಇಂದು ಸಂಜೆ 5:30 ಬಿಡುಗಡೆಯಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ ರಾಮ್ ಗೋಪಾಲ್ ವರ್ಮಾ..

RGV ಅವರ ಕೊರೊನಾ ಹಾಡಿನ ಪ್ರೊಮೋ ವೀಕ್ಷಿಸಿ ಈ ಕೆಳಗಿನ ಲಿಂಕ್ ಮೂಲಕ..

Trending

To Top