Kannada Music

ಕೊರೊನಾ ಬಗ್ಗೆ ಜಯಂತ್ ಕಾಯ್ಕಿಣಿ ರಚಿಸಿರುವ ಹಾಡಿಗೆ ಧ್ವನಿಯಾಗಿದ್ದಾರೆ ಹಿರಿಯ ಗಾಯಕರಾದ ಎಸ್.ಪಿ.ಬಿ

ಎಲ್ಲೆಡೆ ಕೊರೊನೊ ಭೀತಿ ಎದುರಾಗಿದೆ. ಕೊರೊನೊ ವೈರಸ್‌ನಿಂದಾಗಿ ಜನರು ಮನೆಯಲ್ಲಿಯೇ ಕಾಲಕಳೆಯುತ್ತಿದ್ದಾರೆ. ಇನ್ನೊಂದೆಡೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಕನ್ನಡದಲ್ಲಿ ಕೊರೊನೊ ಹಾಡೊಂದು ಬಂದಿದೆ. ಇದಕ್ಕೆ ದನಿಯಾಗಿರೋದು ಖ್ಯಾತ ಗಾಯಕ ಎಸ್‌.ಪಿ.ಬಾಲಸುಬ್ರಮಣ್ಯಂ.

ಕೊರೊನೊ ಬಗ್ಗೆ ಜಾಗೃತಿ ಮೂಡಿಸಲು ಎಸ್‌.ಪಿ.ಬಿ ಮತ್ತು ಜಯಂತ್‌ ಕಾಯ್ಕಿಣಿ ಕೈ ಜೋಡಿಸಿದ್ದಾರೆ. ಜಯಂತ್‌ ಕಾಯ್ಕಿಣಿ ಸಾಹಿತ್ಯವಿರೋ ಹಾಡಿಗೆ ಎಸ್‌ಪಿಬಿ ದನಿಯಾಗಿದ್ದಾರೆ. ಕಾಣದಂತೆ ಆಕ್ರಮಿಸಿದೆ ವೈರಿ ಕೊರೊನಾ ಅನ್ನೋ ಸಾಹಿತ್ಯವಿರೋ ಹಾಡಿನಲ್ಲಿ ಕೊರೊನಾ ಬಗ್ಗೆ ಕಂಪ್ಲೀಟ್ ವಿಚಾರ ತೆರೆದಿಡಲಾಗಿದೆ.

https://www.facebook.com/706849099372933/posts/3001885533202600/

Trending

To Top