Karnataka

ಕೊರೊನಾ ಬಗ್ಗೆ ಇಲ್ಲ ಸಲ್ಲದ ಮಾಹಿತಿ ನಂಬಬೇಡಿ ರಾಜ್ಯ ಸರ್ಕಾರದ ಹೊಸ Corona Watch App ಮೂಲಕ ಸರಿಯಾದ ಮಾಹಿತಿಗಳನ್ನು ಪಡೆಯಿರಿ

ಕೊರೊನಾವೈರಸ್ ವಿರುದ್ಧ ನಿರ್ಣಾಯಕ ಹೋರಾಟಕ್ಕೆ ಸಾರ್ವಜನಿಕರ ಸಹಕಾರವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಯಸಿವೆ. ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ಹಾಗೂ ನೆರವು ಇದೀಗ ಲಭ್ಯವಿದೆ. ಫೇಸ್ಬುಕ್, ವಾಟ್ಸಾಪ್, ಟೆಲಿಗ್ರಾಂ, ಇನ್ಸ್ಟಾಗ್ರಾಂ, ಟಿಕ್ ಟಾಕ್ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಈಗ ಆಂಡ್ರಾಯ್ಡ್ ಆಪ್ ಸರದಿ. ಸರ್ಕಾರ ರಚಿಸಿರುವ ವಾರ್ ರೂಮಿನಿಂದ ಅಧಿಕಾರಿ ಮನೀಶ್ ಮೌದ್ಗೀಲ್ ನೇತೃತ್ವದಲ್ಲಿ ಹೊರ ಬಂದಿದೆ ಕೊರೊನಾ ವಾಚ್ ಎಂಬ ಮೊಬೈಲ್ ಅಪ್ಲಿಕೇಷನ್

ವಾಟ್ಸಾಪ್ ಹಾಗೂ ಫೇಸ್ಬುಕ್ ಮೆಸೇಂಜರ್ ಆಪ್ ಮೂಲಕ ರಿಯಲ್ ಟೈಂನಲ್ಲಿ ಚಾಟ್ ಬಾಟ್ ಬಳಸಿ ಮಾಹಿತಿ ಪಡೆಯುವ ಸೌಲಭ್ಯವೂ ಇದೆ. ಗೂಗಲ್ ಮ್ಯಾಪ್, ಆಂಡ್ರಾಯ್ಡ್ ಆಪ್, ಅಪೋಲೋ ಆಸ್ಪತ್ರೆಯ ಎಐ ಆಧಾರಿತ ಚಾಟ್ ಬಾಟ್ ಹೀಗೆ ವಿವಿಧ ರೀತಿಯಲ್ಲಿ ಮಾಹಿತಿ ಹಾಗೂ ನೆರವು ಲಭ್ಯವಿದೆ.

ಈ ನಡುವೆ ಕರ್ನಾಟಕ ಸರ್ಕಾರದ ಆರೊಗ್ಯ ಇಲಾಖೆಯು ”Corona Watch ” ಎಂಬ ಆಂಡ್ರಾಯ್ಡ್ ಆಪ್ಲಿಕೇಷನ್ ಹೊರತಂದಿದೆ. ಈ ಆಪ್ ಮೂಲಕ ಕೊವಿಡ್19 ಪಾಸಿಟಿವ್ ರೋಗಿಗಳ ಚಲನವಲನಗಳನ್ನು ರಿಯಲ್ ಟೈಮಲ್ಲಿ ಟ್ರ್ಯಾಕ್ ಮಾಡಬಹುದು. ಕೊರೊನಾ ಸೋಂಕಿತರು, ಹೋಂ ಕ್ವಾರಂಟೈನ್ ಆಗಿರುವವರು ಎಲ್ಲೆಲ್ಲಿದ್ದಾರೆ ಎಂದು ಮ್ಯಾಪ್ ನೋಡಿ ಗುರುತಿಸಬಹುದು. ವೈದ್ಯಕೀಯ ನೆರವು ಪಡೆಯುವುದು ಎಲ್ಲಿ? ಕೈಗೆ ಕ್ವಾರಂಟೈನ್ ಸ್ಟ್ಯಾಂಪ್ ಇರುವವರು ಎಲ್ಲೆಂದರಲ್ಲಿ ಓಡಾಡುತ್ತಿದ್ದರೆ ಯಾರಿಗೆ ಕರೆ ಮಾಡಿ ತಿಳಿಸಬೇಕು ಎಂಬೆಲ್ಲ ಮಾಹಿತಿ ಈ ಆಪ್ ನಲ್ಲಿದೆ.

ಸೋಂಕಿತರ ಟ್ರ್ಯಾಕ್ ಮಾಡಲು Corona Watch App
ಪಾಸಿಟಿವ್ ರೋಗಿಗಳ ಚಲನವಲನ ಪತ್ತೆ

ಕೊರೊನಾ ಸೋಂಕಿತ ರೋಗಿ ಕಳೆದ 14 ದಿನಗಳಲ್ಲಿ ಎಲ್ಲೆಲ್ಲಿ ಓಡಾಡುತ್ತಿದ್ದರು ಎಂಬ ಮಾಹಿತಿ ಸಿಗಲಿದೆ. ಸೋಂಕಿತರು ಯಾವ ಜಿಲ್ಲೆಯಲ್ಲಿದ್ದಾರೆ ಎಂದು ತಿಳಿಯಲು ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಹಳೆ ಮಾಹಿತಿ ಜೊತೆಗೆ ಸದ್ಯ ಕೊವಿಡ್19 ರೋಗಿ ಇರುವ ಸ್ಥಳ, ಚಲನವಲನ ಮಾಹಿತಿಯೂ ಸಿಗಲಿದೆ. ಸೋಂಕಿತರು ಭೇಟಿ ಮಾಡಿದ ವ್ಯಕ್ತಿಗಳು ನಿಮಗೆ ತಿಳಿದಿದ್ದರೆ 104, 080-46848600, 080 66692000 ಸಹಾಯವಾಣಿಗೆ ಕರೆ ಮಾಡಬಹುದು.

ನೀವು ಸದ್ಯ ನೆಲೆಸಿರುವ ಸ್ಥಳಕ್ಕೆ ಸಮೀಪದಲ್ಲಿರುವ ಆಸ್ಪತ್ರೆಗಳ ವಿವರ, ಸ್ಯಾಂಪಲ್ ಸಂಗ್ರಹಿಸುವ ಕೇಂದ್ರ ಹಾಗೂ ಟೆಸ್ಟಿಂಗ್ ಕೇಂದ್ರಗಳ ಪಟ್ಟಿಯೂ ಸಿಗಲಿದೆ. ಸೋಂಕಿತರ ಜೊತೆಗೆ ಪ್ರತಿದಿನ ಪಾಸಿಟಿವ್ ಪ್ರಕರಣಗಳ ಸಂಖ್ಯೆಯು ತಿಳಿಯಲಿದೆ. 4.7 ಎಂಬಿ ತೂಕದ ಈ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಆಧಾರಿತ ಆಪ್ ಬಳಸಲು ನಿಮ್ಮ ಫೋನ್ ನಲ್ಲಿ ಆಂಡ್ರಾಯ್ಡ್ ಓಎಸ್ 4.4 ಅಥವಾ ಅದಕ್ಕಿಂತ ಹೆಚ್ಚಿನ ಆವೃತ್ತಿ ಇದ್ದರೆ ಸಾಕು.

Trending

To Top