Tollywood

ಕೊರೊನಾ ನಿಯಂತ್ರಣಕ್ಕೆ 4ಕೋಟಿ ಸಹಾಯಧನ ನೀಡಲಿದ್ದಾರೆ ಡಾರ್ಲಿಂಗ್ ಪ್ರಭಾಸ್

ಟಾಲಿವುಡ್ ಡಾರ್ಲಿಂಗ್ ಪ್ರಭಾಸ್ ಇತ್ತೀಚೆಗಷ್ಟೇ ತಮ್ಮ ಹೊಸ ಸಿನಿಮಾದ ಶೂಟಿಂಗ್ ಅನ್ನು ಯೂರೋಪ್ ನಲ್ಲಿ ಮುಗಿಸಿಕೊಂಡು ಹೈದರಾಬಾದ್ ಗೆ ಹಿಂದಿರುಗಿ ಬಂದರು .. ಕೊರೊನಾ ವಿಚಾರದಿಂದ ಪ್ರಭಾಸ್ ಸಹ ಸೆಲ್ಫ್ ಐಸೋಲೇಶನ್ ನಲ್ಲಿ ಇದ್ದಾರೆ ..

ಮನೆಯಲ್ಲಿದ್ದು ತಮ್ಮ ಗ್ರಂಥಾಲಯದಲ್ಲಿ ಪುಸ್ತಕ ಓದುವುದರಲ್ಲಿ ತೊಡಗಿದ್ದಾರೆ ಯಂಗ್ ರೆಬೆಲ್ ಸ್ಟಾರ್… ಇದರ ಜೊತೆಗೆ ಕೊರೊನಾ ನಿಯಂತ್ರಣಕ್ಕೆ ನೆರವಾಗಿದ್ದಾರೆ..

ನಟ ಪ್ರಭಾಸ್ ಕೊರೊನಾ ನಿಯಂತ್ರಣಕ್ಕೆ 4ಕೋಟಿ ಸಹಾಯಧನ ನೀಡಿದ್ದಾರೆ.. 3 ಕೋಟಿ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ, ಆಂಧ್ರ ಮತ್ತು ತೆಲಂಗಾಣದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಲಾ 50 ಲಕ್ಷ ನೀಡಲು ನಿರ್ಧರಿಸಿದ್ದಾರಂತೆ.

Trending

To Top