ಕೊರೋನಾ ವಿರುದ್ಧದ ಹೋರಾಟವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡುವ ನಿಟ್ಟಿನಲ್ಲಿ ಚಿತ್ರರಂಗದ ತಾರೆಯರು ಕಿರುಚಿತ್ರವನ್ನು ಹೊರತಂದಿದ್ದಾರೆ. ಈ ಕಿರುಚಿತ್ರದಲ್ಲಿ ಎಲ್ಲಾ ಇಂಡಸ್ಟ್ರಿಗಳ ಸ್ಟಾರ್ ನಟರು ನಟಿಸಿದ್ದಾರೆ. ಚಂದನವನದಿಂದ ಶಿವರಾಜ್ ಕುಮಾರ್ ಅವರು ಭಾಗಿಯಾಗಿರುವುದು ನಮ್ಮ ಹೆಮ್ಮೆ. ಇನ್ನುಳಿದಂತೆ, ಅಮಿತಾಬ್ ಬಚ್ಚನ್, ರಜನೀಕಾಂತ್, ಚಿರಂಜೀವಿ, ಮಮ್ಮುಟ್ಟಿ, ಪ್ರಿಯಾಂಕಾ ಚೋಪ್ರಾ, ರಣಬೀರ್ ಕಪೂರ್ ಹಾಗೂ ಇತರರು ಅಭಿನಯಿಸಿದ್ದಾರೆ.
