Bollywood

ಕೊರೊನಾ ಕುರಿತು ಸಂದೇಶ ನೀಡಿದ ವಿರಾಟ್-ಅನುಷ್ಕಾ ವೀಡಿಯೊ ವೈರಲ್ ಆಗಿದೆ…

ಇಡೀ ವಿಶ್ವದಲ್ಲಿ ಕರೋನಾ ಬಾಧೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದೀಗ ಭಾರತದ ಯೂತ್ ಐಕಾನ್ ಆಗಿರುವ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ತಮ್ಮ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ.

ಕರೋನಾದಿಂದ ತಪ್ಪಿಸಿಕೊಳ್ಳಲು ಮನೆಯಲ್ಲಿಯೇ ಇರುವಂತೆ ಕೇಂದ್ರ, ರಾಜ್ಯ ಸರಕಾರ ಮಾಡಿರುವ ಸಲಹೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಪೋಸ್ಟ್ ಮಾಡಿರುವ ದಂಪತಿ, ಸದ್ಯ ಭಾರತ ಮಾತ್ರವಲ್ಲದೇ ಇಡೀ ವಿಶ್ವ ಕಠಿಣ ಪರಿಸ್ಥಿತಿಯಲ್ಲಿದೆ. ಆದ್ದರಿಂದ ಇದನ್ನು ಸಮರ್ಥವಾಗಿ ಎದುರಿಸಲು ಪ್ರತಿಯೊಬ್ಬರ ಪಾತ್ರವಿದೆ. ಪ್ರತಿಯೊಬ್ಬರು ತಮ್ಮನ್ನು ತಾವು ರಕ್ಷಣೆ ಮಾಡಿಕೊಂಡು, ಸ್ವಯಂ ಪ್ರೇರಿತವಾಗಿ ಒಂಟಿಯಾಗಿರಬೇಕು ಎಂದು ಮನವಿ ಮಾಡಿದ್ದಾರೆ.

https://www.instagram.com/p/B98Skz4pt-s/?igshid=1q4zabywxxpx4

Trending

To Top