Film News

ಕೊರೊನಾ ಕಾಟದಿಂದ ಏಪ್ರಿಲ್ 9ರಂದು ಬಿಡುಗಡೆಯಾಗುತ್ತಿಲ್ಲ ‘ರಾಬರ್ಟ್’ : ಈ ಬಗ್ಗೆ ನಿರ್ದೇಶಕ ತರುಣ್ ಏನ್ ಹೇಳಿದ್ದಾರೆ ನೋಡಿ..

ಕರೊನಾ ಎಫೆಕ್ಟ್ ನಿಂದಾಗಿ ಎಲ್ಲೆಡೆ ಚಿತ್ರಣವೇ ಬದಲಾಗಿ ಹೋಗಿದೆ, ಇನ್ನೂ ನಮ್ಮ ಸ್ಯಾಂಡಲ್‍ವುಡ್‍ ಅದಕ್ಕೆ ಹೊರತಾಗಿಲ್ಲ. ಚಾಲೆಂಜಿಗ್‍ ಸ್ಟಾರ್ ದರ್ಶನ್‍ ಅಭಿನಯದ ಬಹು ನಿರೀಕ್ಷಿತ ‘ರಾಬರ್ಟ್’ ಚಿತ್ರದ ಆಡಿಯೋ ರಿಲೀಸ್‍ ಮುಂದೂಡಲಾಗಿದೆ. ಕಲಬುರ್ಗಿಯಲ್ಲಿ ‘ರಾಬ್‍ರ್ಟ್’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲು ಚಿತ್ರತಂಡ ತಯಾರಿ ನಡೆಸಿತ್ತು. ಕರೊನಾ ಕಾಟದಿಂದಾಗಿ ಇದೀಗಾ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಚಿತ್ರತಂಡದ ಮೂಲಗಳಿಂದ ಬಂದಿರುವ ಮಾಹಿತಿ.

ಇನ್ನೂ ಚಿತ್ರವನ್ನು ಎಪ್ರಿಲ್‍ನಲ್ಲಿ ಬಿಡುಗಡೆ ಮಾಡುವ ಪ್ಲಾನ್‍ ಚಿತ್ರತಂಡದಾಗಿತ್ತು. ಈಗ ಚಿತ್ರತಂಡದ ಎಲ್ಲ ಲೆಕ್ಕಚಾರವೂ ಉಲ್ಟಾ-ಪಲ್ಟಾ ಆಗಿದೆ. ಚಿತ್ರದ ನಿರ್ದೇಶಕ ತರುಣ್ ಸುಧೀರ್‍ ಚಿತ್ರದ ಬಿಡುಗಡೆಯ ಕುರಿತು ಟ್ವಿಟರ್‍ನಲ್ಲಿ ಹಂಚಿಕೊಂಡಿದ್ದಾರೆ.
‘ರಾಬರ್ಟ್’ ಚಿತ್ರವೂ ತೆಲಗು ಹಾಗೂ ಕನ್ನಡದಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲ್ಲಿದ್ದು, ಚಿತ್ರದ ತೆಲಗು ವರ್ಷನ್‍ ಬಗ್ಗೆ ಚಿತ್ರತಂಡ ಕೆಲಸದಲ್ಲಿ ತೊಡಗಿಕೊಂಡಿದೆ. ತೆಲಗುವಿನಲ್ಲಿ ಚಿತ್ರದ ಪ್ರಮೋಷನ್‍ ಮಾಡುವ ಬಗ್ಗೆ ನಮ್ಮ ತಂಡ ತಯಾರಿ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿಗಳನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು’ ಎಂದು ತರುಣ್‍ ಟ್ವಿಟ್‍ ಮಾಡಿದ್ದಾರೆ. ಕನ್ನಡ ಚಿತ್ರಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಹಾಗೂ ಪ್ಯಾನ್‍ ಇಂಡಿಯಾ ರಿಲೀಸ್‍ನಿಂದಾಗಿ ಸ್ಯಾಂಡಲ್‍ವುಡ್‍ನ ಚಿತ್ರಗಳು ಬೇರೆ ರಾಜ್ಯಗಳಲ್ಲಿ ಸಖತ್‍ ಸೌಂಡ್‍ ಮಾಡುತ್ತಿವೆ. ಈಗ ಚಾಲೆಂಜಿಂಗ್‍ ಸ್ಟಾರ್ ದರ್ಶನ್‍ ಅಭಿನಯದ ‘ರಾಬರ್ಟ್’ ಕೂಡ ಇದೇ ಸಾಲಿಗೆ ಸೇರಲಿದೆ. ದರ್ಶನ್‍ ಹವಾ ಹೈದರಬಾದ್‍ ನಲ್ಲಿ ಎಷ್ಟು ಸೌಂಡ್‍ ಮಾಡುತ್ತದೆ ಎಂದು ಕಾದುನೋಡಬೇಕಿದೆ.

Trending

To Top