Karnataka

ಕೊರೊನಾದಿಂದ ಇನ್ನು ನಾಲ್ಕು ತಿಂಗಳು ಶಾಲೆಗಳು ಬಂದ್?

ಕೊರೋನಾ ಭೀತಿಯ ಹಿನ್ನಲೆಯಲ್ಲಿ ಇನ್ನೂ ನಾಲ್ಕು ತಿಂಗಳ ಕಾಲ ಶಾಲೆಗಳನ್ನು ಬಂದ್ ಮಾಡಲಾಗುವುದು ಅನ್ನುವ ಸುದ್ದಿ ಹರಿದಾಡುತ್ತಿದೆ.

ಈಗಾಗಲೇ ಪರೀಕ್ಷಾ ವ್ಯವಸ್ಥೆಯಲ್ಲಿ ವ್ಯತ್ಯಾಸವಾಗಿರುವುದರಿಂದ ಇಡೀ ಶೈಕ್ಷಣಿಕ ವರ್ಷದ ಟೈಮ್ ಟೇಬಲ್ ಏರುಪೇರಾಗಿದೆ.

ಇನ್ನು ಹೊಸದಾಗಿ ತರಗತಿಗಳನ್ನು ಪ್ರಾರಂಭಿಸಬೇಕಾದರೆ ಮಕ್ಕಳ ಸುರಕ್ಷತೆ, ಪಠ್ಯ ಪುಸ್ತಕ ಹೀಗೆ ಹತ್ತು ಹಲವು ಸಮಸ್ಯೆಗಳಿದೆ. ಏಕಾಏಕಿ ಶಾಲೆ ತೆರೆದು ತರಗತಿಗಳನ್ನು ಪ್ರಾರಂಭಿಸುವಂತಿಲ್ಲ. ಅದಕ್ಕೆ ಪೂರ್ವ ಸಿದ್ದತೆಗಳ ಅಗತ್ಯವಿದೆ. ಹೀಗಾಗಿ ಜುಲೈ ಅಥವಾ ಆಗಸ್ಟ್ ಹೊತ್ತಿಗೆ ಶಾಲೆಗಳು ಪ್ರಾರಂಭವಾಗುತ್ತದೆ ಎನ್ನಲಾಗಿದೆ.

Trending

To Top