Film News

ಕೊನೆಗೂ ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದಾರೆ ಸೌತ್ ಬ್ಯೂಟಿ ಸಾಯಿಪಲ್ಲವಿ!

ದಕ್ಷಿಣ ಭಾರತದಲ್ಲಿ ನಟಿ ಸಾಯಿಪಲ್ಲವಿ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ? ಅದ್ಭುತ ನಟನೆ , ಸುಲಲಿತ ನೃತ್ಯ , ಸಹಜ ಸೌಂದರ್ಯದಿಂದ ಮನೆಮಾತಾದವರು ಸಾಯಿಪಲ್ಲವಿ. ಮಲಯಾಳಂ, ತಮಿಳ್, ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿ ಜನಪ್ರಿಯರಾಗಿದ್ದಾರೆ.

ಸಾಯಿಪಲ್ಲವಿ ಅಭಿಮಾಣಿಗಳೆಲ್ಲರಿಗೂ ಇವರ ಮದುವೆ ಯಾವಾಗ ಎಂಬ ಪ್ರಶ್ನೆ ಕಾಡುತ್ತಲೇ ಇತ್ತು … ಸಾಯಿಪಲ್ಲವಿ ಮದುವೆ ಬಗ್ಗೆ ಹಲವಾರು ಊಹಾಪೋಹಗಳು ಕೇಳಿಬರುತ್ತಲೇ ಇದ್ದವು. ಆದರೀಗ ಅದಕ್ಕೆಲ್ಲಾ ತೆರೆಬಿದ್ದಿದೆ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಯೊಬ್ಬರು ಮದುವೆ ಯಾವಾಗ ಎಂದು ಕೇಳಿದ ಪ್ರಶ್ನೆಗೆ ಸಾಯಿಪಲ್ಲವಿ ಉತ್ತರಿಸಿದ್ದಾರೆ…

ಸಾಯಿಪಲ್ಲವಿ ಮದುವೆ ಮಾಡಿಕೊಳ್ಳಬಾರದು ಎಂಬ ನಿರ್ಧಾರಕ್ಕೆ ಮಾಡಿದ್ದಾರಂತೆ. ತಂದೆ ತಾಯಿ ಜೊತೆ ಇದ್ದು ಅವರನ್ನು ನೋಡಿಕೊಳ್ಳಲು ಮದುವೆ ಅಡ್ಡಿಯಾಗಬಹುದು ಎಂಬ ಕಾರಣದಿಂದ ಮದುವೆಯಾಗಬಾರದು ಎಂದು ನಿರ್ಧಾರ ಮಾಡಿದ್ದಾರಂತೆ.

Trending

To Top