Bollywood

ಕೇವಲ ಒಂದು ನಿಮಿಷದಲ್ಲಿ ಹೋಮ್ ಮೇಡ್ ಮಾಸ್ಕ್ ತಯಾರಿಸುವುದನ್ನು ಹೇಳಿಕೊಟ್ಟಿದ್ದಾರೆ ಬಾಲಿವುಡ್ ನಟಿ ವಿದ್ಯಾಬಾಲನ್ !

ಪ್ರಪಂಚಾದ್ಯಂತ ಕೊರೊನಾ ವೈರಸ್ ಕರಾಳ ಛಾಯೆ ಮುಂದುವರೆದು ಸಾವಿರಾರು ಮಂದಿಯನ್ನು ಬಲಿ ತೆಗೆದುಕೊಳ್ಳುತ್ತಿದೆ. ಭಾರತದಲ್ಲೂ ಮಹಾಮಾರಿಯ ಅಟ್ಟಹಾಸ ದಿನೇದಿನೇ ಹೆಚ್ಚಾಗುತ್ತಲೇ ಇದೆ. ಇದನ್ನು ನಿಯಂತ್ರಿಸಲು ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಬಳಸಲೇಬೇಕು. ಆದರೆ ಬೇಡಿಕೆಗೆ ತಕ್ಕಷ್ಟು ಮಾಸ್ಕ್‌ಗಳು ಲಭ್ಯವಾಗುತ್ತಿಲ್ಲ. ದೇಶದಾದ್ಯಂತ ಮಾಸ್ಕ್‌ಗಳ ಕೊರತೆ ಕಾಡುತ್ತಿದೆ.

ಈ ಹಿನ್ನೆಲೆಯಲ್ಲಿ ಹಲವಾರು ಸೆಲೆಬ್ರಿಟಿಗಳು ಮನೆಯಲ್ಲೇ ಸರಳವಾಗಿ ಮಾಸ್ಕ್ ತಯಾರಿಸಿಕೊಳ್ಳುವುದು ಹೇಗೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇದೀಗ ನಟಿ ವಿದ್ಯಾ ಬಾಲನ್ ಸಹ ಅದೇ ರೀತಿಯ ಒಂದು ಪ್ರಯತ್ನ ಮಾಡಿದ್ದಾರೆ.
ಇಷ್ಟಕ್ಕೂ ಅವರು ಮಾಸ್ಕ್ ತಯಾರಿಸಲು ಬಳಸಿರುವುದು ಬ್ಲೌಸ್ ಪೀಸ್. ಪ್ರತಿಯೊಬ್ಬರ ಮನೆಯಲ್ಲೂ ಬ್ಲೌಸ್ ಪೀಸ್‍ಗಳು ದಂಡಿಯಾಗಿ ಇರುತ್ತವೆ. ಅರಿಸಿನ, ಕುಂಕುಮದ ಜೊತೆಗೆ ಬ್ಲೌಸ್ ಪೀಸ್‌ಗಳನ್ನು ಮಹಿಳೆಯರಿಗೆ ಕೊಡುವ ವಾಡಿಕೆ ಬಹಳಷ್ಟು ಕಡೆ ಇದೆ. ಇದೀಗ ಇದೇ ಬ್ಲೌಸ್ ಪೀಸ್ ಮಾಸ್ಕ್ ತಯಾರಿಕೆಗೆ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ವಿದ್ಯಾ ಬಾಲನ್ ತೋರಿಸಿಕೊಟ್ಟಿದ್ದಾರೆ.

ಇದಕ್ಕೆ ಬೇಕಾಗಿರುವುದು ಒಂದು ಬ್ಲೌಸ್ ಪೀಸ್, ಎರಡು ರಬ್ಬರ್ ಬ್ಯಾಂಡ್. ಇಷ್ಟನ್ನು ಬಳಸಿ ಮಾಸ್ಕ್ ತಯಾರಿಸುವುದು ಹೇಗೆ ಎಂಬುದನ್ನು ಇನ್‍ಸ್ಟಾಗ್ರಾಮ್‌ನಲ್ಲಿ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ. “ಒಂದು ಸೀರೆಯಿಂದ ಸಾಕಷ್ಟು ಮಾಸ್ಕ್‌ಗಳನ್ನು ತಯಾರಿಸಿಕೊಳ್ಳಬಹುದು. ಹೋಮ್ ಮೇಡ್ ಮಾಸ್ಕ್, ನಮ್ಮ ದೇಶ, ನಮ್ಮ ಮಾಸ್ಕ್” ಎಂದಿದ್ದಾರೆ ವಿದ್ಯಾ ಬಾಲನ್.

https://www.instagram.com/tv/B_HnQ9wnYbY/?igshid=1wpmo2eld94p4

Trending

To Top