Film News

ಕೆಜಿಎಫ್2 ರಿಲೀಸ್ ಬಗ್ಗೆ ಹೇಳಿಕೆ ನೀಡಿದ ರಾಕಿಂಗ್ ಸ್ಟಾರ್

ರಾಕಿಂಗ್ ಸ್ಟಾರ್ ಯಶ್ ನಟಿಸಿದ ಕೆಜಿಎಫ್ 2 ಚಿತ್ರ 2020 ರ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಕೆಜಿಎಫ್ ಚಾಪ್ಟರ್ 1 ಗಿಂತ ಕೆಜಿಎಫ್ ಚಾಪ್ಟರ್ 2 ವಿಶೇಷವಾಗಿರಲಿದೆ , ಇನ್ನು ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿದೆ ಎಂದು ಸ್ವತಃ ಯಶ್ ಹೇಳಿದ್ದರು.
ದಸರಾ ಹಬ್ಬದ ಪ್ರಯುಕ್ತ ಆಕ್ಟೊಬರ್ 23ರಂದು ಕೆಜಿಎಫ್2 ಚಿತ್ರ ಬಿಡುಗಡೆಯಾಗಲಿದೆ ಎಂದು ಈಗಾಗಲೇ ಚಿತ್ರತಂಡ ಘೋಷಣೆ ಮಾಡಿದೆ. ಇತ್ತೀಚೆಗೆ ಬಂದಿರುವ ವರದಿಗಳ ಪ್ರಕಾರ ಕೆಜಿಎಫ್2 ಸಿನಿಮಾ ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆಯಾಗುತ್ತದೆ ಎಂಬ ವಿಷಯ ಕೇಳಿಬಂದಿತ್ತು.

ಭಾರತದಲ್ಲಿ ಕೊರೊನಾ ವೈರಸ್ ಹರಡುವುದನ್ನು ತಡೆಯಲು ಸರ್ಕಾರ ವಿಧಿಸಿರುವ ಲಾಕ್‌ಡೌನ್ ಇಂದಾಗಿ, ಥಿಯೇಟರ್ ಗಳು ಬಂದ್ ಆಗಿರುವುದರಿಂದ, ಚಲನಚಿತ್ರಗಳ ಬಿಡುಗಡೆ ತಡವಾಗಿದೆ. ಹಾಗಾಗಿ ತಮಗಾಗುತ್ತಿರುವ ನಷ್ಟವನ್ನು ಕಡಿಮೆ ಮಾಡಿಕೊಳ್ಳುವ ಸಲುವಾಗಿ ಕೆಲವು ಚಲನಚಿತ್ರ ನಿರ್ಮಾಪಕರು ಓಟಿಟಿ ಪ್ಲಾಟ್ ಫಾರ್ಮ್ ಗಳನ್ನು ತಮ್ಮ ಸಿನಿಮಾಗಳನ್ನು ಬಿಡುಗಡೆ ಮಾಡುವ ನಿರ್ಧಾರ ಮಾಡಿದ್ದಾರೆ. ಇಲ್ಲಿಯವರೆಗೆ, ಪೊನ್ ಮಗಳ್ ವಂದಾಳ್ ಮತ್ತು ಗುಲಾಬೊ ಸೀತಾಬೊ ಅಂತಹ ದೊಡ್ಡ ಚಿತ್ರಗಳು ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆಯಾಗಿವೆ. ಇದರಿಂದಾಗಿ, ಡಿಜಿಟಲ್ ಪ್ಲಾಟ್‌ ಫಾರ್ಮ್‌ ನಲ್ಲಿ ಕೆಜಿಎಫ್ 2 ಬಿಡುಗಡೆಯಾಗಬಹುದು ಎಂಬ ಮಾತುಗಳು ಕೇಳಿಬರುತ್ತಿತ್ತು.

ಕೆಜಿಎಫ್2 ಸಿನಿಮಾ ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆಯಾಗುವ ಬಗ್ಗೆ ಬಾಲಿವುಡ್ ವೆಬ್ ಸೈಟ್ ಒಂದು ಯಶ್ ಅವರನ್ನು ಕೇಳಿದಾಗ, “ಈ ವರದಿಗಳು ಎಲ್ಲಿಂದ ಬರುತ್ತವೆ ಎಂದು ನನಗೆ ತಿಳಿದಿಲ್ಲ. ಕೆಜಿಎಫ್2 ಚಿತ್ರವನ್ನು ಒಟಿಟಿ ಪ್ಲಾಟ್‌ ಫಾರ್ಮ್‌ ನಲ್ಲಿ ಬಿಡುಗಡೆ ಮಾಡುವ ಪ್ರಶ್ನೆಯೇ ಇಲ್ಲ. ಇಡೀ ಚಿತ್ರವನ್ನು ವಿನ್ಯಾಸಗೊಳಿಸಿರುವುದು ದೊಡ್ಡ ಪರದೆಯ ಮೇಲೆ ನೋಡುವ ಸಲುವಾಗಿ. ನನ್ನ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಮತ್ತು ನನಗೆ ಪ್ರೇಕ್ಷಕರ ನಿರೀಕ್ಷೆಗಳು ಏನೆಂದು ತಿಳಿದಿದೆ. ಕೆಜಿಎಫ್2 ಸಿನಿಮಾ ಮೊದಲ ಚಿತ್ರಕ್ಕಿಂತ ಹೆಚ್ಚು ಅದ್ಧೂರಿಯಾಗಿರಬೇಕು ಎಂದು ಅಭಿಮಾನಿಗಳು ಬಯಸುತ್ತಾರೆ. ನನ್ನ ಅಭಿಮಾನಿಗಳಿಗೆ ನಾನು ನಿರಾಸೆ ಮಾಡುವುವುದಿಲ್ಲ..!” ಎಂದಿದ್ದಾರೆ ಯಶ್.

Trending

To Top