Film News

ಕೆಜಿಎಫ್2 ರಿಲೀಸ್ ದಿನಾಂಕದಲ್ಲಿ ಬದಲಾವಣೆ ಇಲ್ಲ ; ದಸರಾಗೆ ಬರಲಿದ್ದಾನೆ ರಾಕಿ ಭಾಯ್ !

ಕೆಜಿಎಫ್2 ಚಿತ್ರದ ಮೇಲೆ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಇಡೀ ಭಾರತದಲ್ಲೇ ಎಲ್ಲರಿಗೂ ಬಹಳ ಕುತೂಹಲವಿದೆ. ಯಶ್, ಸಂಜಯ್ ದತ್ ಮತ್ತು ರವೀನಾ ಟಂಡನ್ ಅವರ ಪಾತ್ರಗಳನ್ನು ತೆರೆಮೇಲೆ ನೋಡಲು ಎಲ್ಲರೂ ಬಹಳ ಉತ್ಸುಕರಾಗಿದ್ದಾರೆ.

ಆದರೆ ಲಾಕ್ ಡೌನ್ ಇರುವ ಕಾರಣ ಬಹುತೇಕ ಎಲ್ಲಾ ಚಿತ್ರಗಳ ಸ್ಥಗಿತಗೊಂಡಿರುವ ಹಿನ್ನಲೆಯಿಂದಾಗಿ ಅಭಿಮಾನಿಗಳೆಲ್ಲರಿಗೂ ಒಂದು ಸಂದೇಹ ಮೂಡಿದೆ. ಅದುವೇ ಕೆಜಿಎಫ್2 ಚಿತ್ರದ ಕೆಲಸಗಳು ಬಾಕಿ ಉಳಿದಿರುವುದರಿಂದ ಚಿತ್ರತಂಡ ಇನ್ನು ಟೀಸರ್ ಸಹ ಹೊರಬಿಟ್ಟಿಲ್ಲ. ಆದುದರಿಂದಾಗಿ ಕೆಜಿಎಫ್2 ಚಿತ್ರದ ರಿಲೀಸ್ ಡೇಟ್ ಕೂಡ ಮುಂದೂಡುವಂತಾಗಬಹುದು ಎಂದು ಅಭಿಮಾನಿಗಳಲ್ಲಿ ಗೊಂದಲ ಮೂಡಿತ್ತು. ಆದರೆ ಈ ಪ್ರಶ್ನೆಗಳಿಗೆ ಈಗ ತೆರೆಬಿದ್ದಿದೆ.

ನಿರ್ಮಾಪಕ ಕಾರ್ತಿಕ್ ಗೌಡ ಈ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಕಾರ್ತಿಕ್ ಗೌಡ , ಕೆಜಿಎಫ್2 ರಿಲೀಸ್ ಡೇಟ್ ನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಶೇ.80 ರಷ್ಟು ಚಿತ್ರೀಕರಣ ಈಗಾಗಲೇ ಮುಗಿದಿದೆ . ಉಳಿದಿರುವ ದೃಶ್ಯಗಳ ಚಿತ್ರೀಕರಣವನ್ನು ಲಾಕ್ ಡೌನ್ ನಂತರ ಮುಗಿಸಿವುದಾಗಿ ಹೇಳಿದ್ದಾರೆ.

Trending

To Top