Film News

ಕೆಜಿಎಫ್2 ಚಿತ್ರದಿಂದ ಹೊರನಡೆದ ಅನಂತ್ ನಾಗ್!

ಪ್ರತಿದಿನ ಹೊಸದೊಂದು ವಿಚಾರಕ್ಕಾಗಿ ಕೆಜಿಎಫ್2 ಸಿಬಿಮಾ ಸುದ್ದಿಯಾಗುತ್ತಿದೆ . ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದ್ದು ಕೆಜಿಎಫ್2 ಸಿನಿಮಾಗೆ ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೆ ಬಾಲಿವುಡ್ ನಲ್ಲೂ ಸಹ ಬಹು ಬೇಡಿಕೆ ಹೊಂದಿದೆ. ಸಂಜಯ್ ದತ್, ರವೀನಾ ಟಂಡನ್, ರಾವ್ ರಮೇಶ್ ಹೀಗೆ ಎಲ್ಲಾ ಭಾಷೆಯ ಹಲವಾರು ಕಲಾವಿದರು ಕೆಜಿಎಫ್2 ಚಿತ್ರದಲ್ಲಿ ನಟಿಸುತ್ತಿದ್ದಾರೆ . ಶೂಟಿಂಗ್ ಸಹ ಇನ್ನೇನು ಮುಗಿಯುವ ಹಂತದಲ್ಲಿದ್ದು ಈ ವರ್ಷಾಂತ್ಯಕ್ಕೆ ತೆರೆಮೇಲೆ ತರುವ ಸಿದ್ಧತೆಯನ್ನು ನಿರ್ದೇಶಕರು ಮಾಡಿಕೊಂಡಿದ್ದರು.

ಹೀಗಿರುವಾಗ ಇಂದು ಕೆಜಿಎಫ್2 ಬಗ್ಗೆ ಒಂದು ಶಾಕಿಂಗ್ ಸುದ್ದಿ ಹೊರಬಂದಿದೆ. ಅದೇನೆಂದರೆ ಅನಂತ್ ನಾಗ್ ಅವರು ಚಿತ್ರತಂಡದಿಂದ ಹೊರಬಂದಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಕೆಜಿಎಫ್ ಚಾಪ್ಟರ್ 1 ನಲ್ಲಿ ರಾಕಿ ಪಾತ್ರವನ್ನು ಪರಿಚಯಿಸಿ ಕಥೆಯನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ಪತ್ರಕರ್ತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಅನಂತ್ ನಾಗ್. ಈ ಪಾತ್ರವು ಕೆಜಿಎಫ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಒಂದಾಗಿತ್ತು. ಅನಂತ್ ನಾಗ್ ಅವರು ಕೆಜಿಎಫ್2 ತಂಡದಿಂದ ಹೊರಬಂದ ಕಾರಣ ಇನ್ನೂ ಸರಿಯಾಗಿ ತಿಳಿದು ಬಂದಿಲ್ಲ . ಈ ಪ್ರಕರಣದಿಂದ ನಿರ್ದೇಶಕರಾದ ಪ್ರಶಾಂತ್ ನೀಲ್ ಅವರು ಸಿನಿಮಾದ ಸ್ಕ್ರಿಪ್ಟ್ ಬದಲಿಸಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

Trending

To Top