News

ಕೆಜಿಎಫ್ 2 ಚಿತ್ರದಲ್ಲಿ ಯಶ್‍ಗೆ ಠಕ್ಕರ್ ಕೊಟ್ಟ ಸಂಜಯ್ ದತ್: ಅಧೀರಾ ಬಗ್ಗೆ ಸಂಜು ಬಾಬಾ ಹೇಳಿದ್ದೇನು?

KGF Chapter 2

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ ಬರೆದಿದ್ದ ಕೆಜಿಎಫ್ ಚಾಪ್ಟರ್ 1 ಚಿತ್ರದ ಮುಂದುವರೆದ ಭಾಗ ಕೆಜಿಎಫ್ 2 ಅದಾಗಲೇ ಬೆಟ್ಟದಷ್ಟು ನಿರೀಕ್ಷೆಗಳನ್ನು ಹೆಚ್ಚಿಸಿದ್ದು ಈ ಮಧ್ಯೆ ಬಾಲಿವುಡ್ ನಟ ಸಂಜಯ್ ದತ್ ಚಿತ್ರದಲ್ಲಿನ ಅಧೀರಾ ಪಾತ್ರದ ಬಗ್ಗೆ ಇದೇ ಮೊದಲ ಬಾರಿಗೆ ಮಾತನಾಡಿದ್ದಾರೆ.

ಕೆಜಿಎಫ್ 2 ಚಿತ್ರದ ಶೂಟಿಂಗ್ ಭರದಿಂದ ಸಾಗಿದೆ. ಇನ್ನು ಚಿತ್ರದ ಶೂಟಿಂಗ್ ಗಾಗಿ ಸಂಜಯ್ ದತ್ ಮೈಸೂರಿಗೆ ಬಂದಿದ್ದಾರೆ ಎನ್ನಲಾಗಿದೆ. ಈ ವೇಳೆ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿ ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದಾರೆ. 2012ರಲ್ಲಿ ನಾನು ನಟಿಸಿದ್ದ ಅಗ್ನೀಪತ್ ಚಿತ್ರ ತೆರೆಕಂಡಿತ್ತು. ಈ ಚಿತ್ರದಲ್ಲಿ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಂಡಿದ್ದೇ. ಈಗ ಮತ್ತದೇ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಖುಷಿಯಾಗಿದೆ. ಅಗ್ನೀಪತ್ ಚಿತ್ರದ ನಂತರ ನನಗೆ ಸಿಕ್ಕ ಶ್ರೇಷ್ಠ ವಿಲನ್ ಪಾತ್ರ ಇದು ಎಂದು ಸಂಜಯ್ ದತ್ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

ಕೆಜಿಎಫ್ ಚಾಪ್ಟರ್ 1 ಚಿತ್ರ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಿ ದೇಶಾದ್ಯಂತ ಬರೋಬ್ಬರಿ 243 ಕೋಟಿ ರುಪಾಯಿಯನ್ನು ಗಳಿಸಿ ಕನ್ನಡದ ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆ ಬರೆದಿತ್ತು.

Trending

To Top