ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹೆಣ್ಣು ಮಗುವಿನ ತಾಯಿಯಾಗಿದ್ದಾರೆ. ಅರೇ ಇದೇನಿದು ಮೊನ್ನೆ ಮೊನ್ನೆ ಟಿವಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಆಕೆ ಗರ್ಭಿಣಿಯ ಲಕ್ಷಣವೇ ಹೊಂದಿರಲಿಲ್ಲ ಎಂದು ಅಚ್ಚರಿಪಡಬೇಡಿ.
ಯಾಕಂದ್ರೆ ಶಿಲ್ಪಾ ಶೆಟ್ಟಿ ಹೆಣ್ಣು ಮಗುವನ್ನು ಪಡೆದಿರುವುದು ಬಾಡಿಗೆ ತಾಯಿಯ ಮೂಲಕ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, “ಓಂ ಶ್ರೀ ಗಣೇಶಯಾ ನಮಃ. ನಮ್ಮ ಪ್ರಾರ್ಥನೆ ದೇವರಿಗೆ ತಲುಪಿದ್ದು, ಮನೆಗೆ ಆಗಮಿಸಿರುವ ಪುಟ್ಟ ದೇವತೆ ಶಮಿಶಾ ಶೆಟ್ಟಿಯನ್ನು ನಿಮಗೆ ಪರಿಚಯಿಸುತ್ತಿದ್ದೇನೆ. ಜೂನಿಯರ್ ಶಿಲ್ಪಾ ಶೆಟ್ಟಿ ಕುಂದ್ರಾ ಫೆಬ್ರವರಿ 15ರಂದು ಜನಿಸಿದ್ದಾಳೆ. ಸ ಅಂದ್ರೆ ಸಂಸ್ಕಂತದಲ್ಲಿ ನಮ್ಮವಳು ಮತ್ತು ಮಿಶಾದ ಅಂದ್ರೆ ದೇವರ ರೀತಿಯಲ್ಲಿರುವ ಎಂದರ್ಥ. ಹಾಗಾಗಿ ನಮ್ಮ ಮನೆಗೆ ಆಗಮಿಸಿರುವ ಲಕ್ಷ್ಮಿಗೆ ಸಮಿಶಾ ಎಂದು ಹೆಸರಿಟ್ಟಿದ್ದೇವೆ.
ನಿಮ್ಮ ಪ್ರೀತಿ ಮತ್ತು ಆಶೀರ್ವಾದ ನಮ್ಮ ಮಕ್ಕಳ ಮೇಲಿರಲಿ. ವಿಯಾನ್ ರಾಜ್ ಕುಂದ್ರಾ ಜೊತೆ ಆಡಲು ಪುಟ್ಟ ಸೋದರಿ ಆಗಮಿಸಿದ್ದಾಳೆ” ಅಂದಿದ್ದಾರೆ.
ತಮ್ಮ 37ನೇ ವಯಸ್ಸಿನಲ್ಲಿ ಗಂಡು ಮಗುವನ್ನು ಪಡೆದಿದ್ದ ಅವರು 44ನೇ ವಯಸ್ಸಿನಲ್ಲಿ ಹೆಣ್ಣು ಮಗುವನ್ನು ಬಾಡಿಗೆ ತಾಯಿ ಮೂಲಕ ಪಡೆದುಕೊಂಡಿದ್ದಾರೆ. ತಾವು ಈ ಹಿಂದೆ ಚೊಚ್ಚಲ ಗರ್ಭ ಧರಿಸಿದ ಸಂದರ್ಭದಲ್ಲಿ ಮಾತನಾಡಿದ ಶಿಲ್ಪಾ ಶೆಟ್ಟಿ,37ನೇ ವರ್ಷದಲ್ಲಿ ನಾನು ತಾಯಿಯಾಗಬೇಕೆಂಬ ಇಚ್ಛೆ ನನ್ನದಾಗಿರಲಿಲ್ಲ. ಸೂಕ್ತ ಸಮಯದಲ್ಲಿ ಮಹಿಳೆ ತಾಯ್ತನದ ಅನುಭವ ಪಡೆಯಬೇಕು. ಆದರೆ ನನಗೆ ರಾಜ್ ಕುಂದ್ರಾ ಸರಿಯಾದ ಸಮಯದಲ್ಲಿ ಸಿಗದಿದ್ದಕ್ಕೆ 37ನೇ ವಯಸ್ಸಿನಲ್ಲಿ ತಾಯಿಯಾದೆ ಅಂದಿದ್ದರು.
ಈ ನಂತ್ರ ಮತ್ತೊಂದು ಮಗುವಿನ ಪ್ರಯತ್ನದಲ್ಲಿದ್ದ ಕುಂದ್ರಾ ದಂಪತಿ ಕೊನೆಗೆ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದಿದ್ದಾರೆ.
https://www.instagram.com/p/B80Uq2RB3yj/?igshid=1ct6hz4ipyvlr
