gossip

ಕಿಶನ್‌-ಚಂದನಾ ‘ರಿಯಲ್‌’ ಲವ್‌ ವಾರ್‌ ! ಫುಲ್‌ ಫೀಲಿಂಗ್ಸ್ ಫೈಟ್‌..!

ಬಿಗ್‌ಬಾಸ್‌ನಲ್ಲೊಂದು ಒನ್ ಸೈಡ್‌ ಲವ್‌ಸ್ಟೋರಿಯ ಪೋಸ್ಟ್‌ಮಾರ್ಟಂ ನಡೀತಿದೆ. ತಪ್ಪು ಯಾರದ್ದು? ಸರಿ ಯಾರದ್ದು ಅನ್ನೋ ಚರ್ಚೆ ಶುರುವಾಗಿದೆ. ಅಂದ್ಹಾಗೇ, ಇದೆಲ್ಲಾ ಶುರುವಾಗಿದ್ದು ಬಿಗ್‌ಬಾಸ್‌ ಕೊಟ್ಟ ಟಾಸ್ಕ್‌ನಿಂದ. ವೇಗವಾಗಿ ಓಡಿ ಬಜ್ಹರ್‌ ಒತ್ತಿದ್ದ ಚಂದನಾ ಇಬ್ಬರಿಗೆ ಕೆನ್ನೆಗೆ ಹೊಡೆಯಬೇಕು..ಇಬ್ಬರಿಗೆ ಮುತ್ತು ನೀಡಬೇಕು ಎಂದು ಬಿಗ್‌ಬಾಸ್‌ ಸೂಚಿಸಿದ್ದರು. ಅಲ್ಲದೇ, ಸೂಕ್ತ ಕಾರಣಗಳನ್ನ ನೀಡಬೇಕು ಎಂದು ಹೇಳಿದ್ದರು. ಆಗ ಚಂದನಾ ಮೊದಲು ಆಯ್ಕೆ ಮಾಡಿಕೊಂಡಿದ್ದೇ ಕಿಶನ್‌.

ಅದಾಗಲೇ ವೀಕ್ಷಕರು ಮರೆತು ಹೋಗಿದ್ದ ಮ್ಯಾಟರ್‌ನ ಮತ್ತೆ ಮುನ್ನೆಲೆಗೆ ತಂದ ಚಂದನಾ, ಕಿಶನ್‌ ನನ್ನ ಫೀಲಿಂಗ್ಸ್ ಜೊತೆ ಆಟವಾಡಿದರು ಅನ್ನೋ ಗಂಭೀರ ಆರೋಪ ಮಾಡಿದರು. ಆದ್ರೆ, ಚಂದನಾ ಹೇಳಿದ್ದನ್ನೆಲ್ಲಾ ಕಿಶನ್‌ ಕೇಳಿಸಿಕೊಂಡು ಸುಮ್ಮನಾಗಲಿಲ್ಲ. ಚಂದನಾಗೆ ಸಮರ್ಪಕವಾಗಿಯೇ ಪ್ರತ್ಯುತ್ತರ ನೀಡಿದರು.

ನನಗೆ ಹೇಳಿದ್ರಿ. ಅದು ನಿಮ್ಮ ರಿಯಲ್ ಫೀಲಿಂಗ್ಸಾ ಅಥವಾ ಕಾಮಿಡಿ ಮಾಡ್ತಿದ್ರಾ ನನಗೆ ಗೊತ್ತಿಲ್ಲ. ನಾನೇನಾದ್ರೂ ನಿಜವಾಗ್ಲೂ ತೆಗೆದುಕೊಂಡಿದ್ದಿದ್ರೆ, ಅದು ನನ್ನ ಮೇಲೆ ತುಂಬಾನೇ ಪರಿಣಾಮ ಬೀರುತ್ತಿತ್ತು. ಪ್ರಾರಂಭದಲ್ಲಿ ಫೀಲಿಂಗ್ಸ್ ಇರೋದು ನಿಜನೇನೋ ಅನಿಸ್ತಿತ್ತು. ಆ ಮೇಲೆ ನನ್ನ ಫೀಲಿಂಗ್ಸ್ ಜೊತೆ ಆಟವಾಡಿದ್ರಿ ಅನಿಸಿತು’ ಅಂತಾ ಚಂದನಾ ಕಿಶನ್‌ ಹೇಳ್ತಿದ್ದಂತೆ ಆತನ ಮುಖ ಕೆಂಡವಾಯ್ತು.

‘ನಾನು ಯಾವಾಗ ಕಾಮಿಡಿ ಎಂದೆ. ನೀವು ಇಲ್ಲ ಎಂದಾಯ್ತಲ್ಲಾ. ನಾನು ನಿಮ್ಮ ಫೀಲಿಂಗ್ಸ್ ಜೊತೆ ಆಟವಾಡಿಲ್ಲ. ನಿಮ್ಮನ್ನ ನಾನು ಇಷ್ಟಪಟ್ಟಿದ್ದು ಹೌದು. ರಕ್ಷಾ ಬಂಧನ್ ದಿನ ನಿಮ್ಮನ್ನ ತಂಗಿ ಎಂದು ಕರೆದಿದ್ದು ಹೌದು, ರಕ್ಷಾ ಬಂಧನ್‌ ದಿನ ನಿಮ್ಮನ್ನ ಇಷ್ಟಪಡ್ತೀನಿ ಅಂತಾ ಹೇಳಿದ್ದು ಹೌದು. ನಿಮ್ಮಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದಾಗ ನಾನ್ ಒಂದ್ ಸ್ಟೆಪ್‌ ಬ್ಯಾಕ್ ತಗೊಂಡೆ. ನಾನು ಯಾರ ಬಳಿಯೂ ಪ್ರೀತಿ ಭಿಕ್ಷೆ ಕೇಳಲ್ಲ. ಪ್ರೀತಿಗೂ ಒಂದ್‌ ವ್ಯಾಲ್ಯೂ ಇರುತ್ತೆ. ಒಬ್ಬ ಮನುಷ್ಯನಿಗೆ ಫೀಲಿಂಗ್ಸ್ ಜೊತೆ ಪ್ಲೇ ಮಾಡಿದ ಅಂದಾಗ ಅವನು ಎಲ್ಲರ ಮುಂದೆ ಚಿಕ್ಕವನಾಗಿಬಿಡ್ತಾನೆ. ನಾನು ಫೀಲಿಂಗ್ಸ್ ಜೊತೆ ಆಟವಾಡಿಲ್ಲ. ನೀವು ಸಿರಿಯಸ್ಸಾಗಿ ತೆಗೆದುಕೊಂಡಿದಿದ್ದರೆ ಅದು ಸೀರಿಯಸ್ಸಾಗಿ ಹೋಗ್ತಿತ್ತು.’ ಅಂತಾ ಕಿಶನ್‌ ಚಂದನಾಗೆ ಸರಿಯಾಗಿಯೇ ಟಕ್ಕರ್ ಕೊಟ್ಟರು.

ಆ ನಂತರ ಈ ಬಗ್ಗೆ ದೊಡ್ಡ ಚರ್ಚೆಯೇ ನಡೆಯಿತು. ಬಟ್‌ ಚಂದನಾ ಕೊಟ್ಟ ಕಾರಣಗಳಿಗೆ ಬಹುತೇಕರು ಡಿಸ್‌ಲೈಕ್‌ ಕೊಟ್ಟರು. ಹೀಗಾಗಿ ಚಂದನಾಗೆ ಪಾಯಿಂಟ್ಸ್‌ ಸಿಗಲಿಲ್ಲ.

Trending

To Top