Film News

ಕಿಚ್ಚ ಸುದೀಪ್ ಬಗ್ಗೆ ಅನು ಪ್ರಭಾಕರ್ ಹೇಳಿದ ವಿಶೇಷವಾದ ಮಾತು…

ಕಿಚ್ಚ ಸುದೀಪ್ ಒಬ್ಬ ಉತ್ತಮ ನಿರ್ದೇಶಕ ಎಂದು ನಟಿ ಅನು ಪ್ರಭಾಕರ್ ಮುಖರ್ಜಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಟ ಸುದೀಪ್ ಅನೇಕ ವರ್ಷಗಳ ಹಿಂದೆ ‘ನಂ.73 ಶಾಂತಿ ನಿವಾಸ’ ಸಿನಿಮಾವನ್ನು ನಿರ್ದೇಶಿಸಿ ಯಶಸ್ಸು ಕಂಡಿದ್ದರು. ಅಂದಿಗೆ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇತ್ತೀಚೆಗೆ ‘ನಂ.73 ಶಾಂತಿ ನಿವಾಸ’ ಸಿನಿಮಾ ಕಿರುತೆರೆಯಲ್ಲಿ ಪ್ರಸಾರವಾಗಿತ್ತು. ಈ ಚಿತ್ರವನ್ನು ನೋಡಿದ ಅಭಿಮಾನಿಯೊಬ್ಬರು ಅನು ಪ್ರಭಾಕರ್‌ಗೆ ಟ್ವೀಟ್ ಮಾಡಿ, ನಿಮ್ಮ ಅಭಿನಯ ಅದ್ಭುತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಭಿಮಾನಿಯ ಟ್ವೀಟ್‍ಗೆ ಪ್ರತಿಕ್ರಿಯಿಸಿದ ನಟಿ ಅನು ಪ್ರಭಾಕರ್ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ‘ನಂ.73 ಶಾಂತಿ ನಿವಾಸ’ ಸಿನಿಮಾವನ್ನು ತುಂಬಾ ಪ್ರೀತಿಸುತ್ತೇನೆ. ನನ್ನ ಸಿನಿಮಾ ವೃತ್ತಿ ಜೀವನದಲ್ಲಿ ನಾನು ಕೆಲಸ ಮಾಡಿದ ಅತ್ಯುತ್ತಮ ನಿರ್ದೇಶಕರಲ್ಲಿ ಕಿಚ್ಚ ಸುದೀಪ್ ಒಬ್ಬರು. ಈ ಬಗ್ಗೆ ನಾನು ಅನೇಕ ಬಾರಿ ಹೇಳಿದ್ದೇನೆ” ಎಂದು ಖುಷಿಯಿಂದ ಸುದೀಪ್ ನಿರ್ದೇಶನದ ಬಗ್ಗೆ ಮಾತನಾಡಿದರು.

https://twitter.com/AnuPrabhakar9/status/1254871875777212419?s=19

ಅನು ಪ್ರಭಾಕರ್ ಟ್ವೀಟ್ ನೋಡಿದ ಸುದೀಪ್, “ನೀವು ಕೂಡ ತುಂಬಾ ಅತ್ಯುತ್ತಮ ನಟಿ ಅನು ಪ್ರಭಾಕರ್. ಹೀಗಾಗಿ ಶೀಫ್ರದಲ್ಲೇ ನಿಮ್ಮೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ. ಹೌದು. ’73 ಶಾಂತಿ ನಿವಾಸ’ ಸಿನಿಮಾ ನನಗೆ ಯಾವಾಗಲು ಉತ್ತಮ ಆಯ್ಕೆಯಾಗಿದೆ. ನೀವೆಲ್ಲರೂ ಅದ್ಭುತ ನಟರು, ನನಗೆ ಜೀವನ ಕೊಟ್ಟವರು” ಎಂದು ಧನ್ಯವಾದ ತಿಳಿಸಿದ್ದಾರೆ.

https://twitter.com/KicchaSudeep/status/1255002135554473987?s=19

Trending

To Top