Film News

ಕಾರ್ಮಿಕರ ದಿನಾಚರಣೆಯಂದು ರಾಬರ್ಟ್ ಚಿತ್ರತಂಡದಿಂದ ಸ್ಪೆಷಲ್ ಗಿಫ್ಟ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ, ಅಭಿಮಾನಿಗಳ ಬಹುನಿರೀಕ್ಷಿತ ಸಿನಿಮಾ ರಾಬರ್ಟ್. ಲಾಕ್ಡೌನ್ನಿಂದ ಸಿನಿಮಾ ಯಾವಾಗ ತೆರೆ ಮೇಲೆ ಬರುತ್ತೋ ಅಂತ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಇದರ ನಡುವೆ ರಾಬರ್ಟ್ ಚಿತ್ರತಂಡದಿಂದ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಮೇ 1 ರಂದು ವಿಶ್ವ ಕಾರ್ಮಿಕರ ದಿನದ ಅಂಗವಾಗಿ ರಾಬರ್ಟ್ ಚಿತ್ರತಂಡ ಸ್ಪೆಷಲ್ ವಿಡಿಯೋ ರಿಲೀಸ್ ಮಾಡ್ತಿದೆ.

ತೆರೆಯ ಹಿಂದೆ‌ ಶ್ರಮಿಸಿರೋ ಕಾರ್ಮಿಕರಿಗೆ ಗೌರವ ಸೂಚಿಸುವ ಸಲುವಾಗಿ ಸ್ಪೆಷಲ್ ಮೇಕಿಂಗ್ ವೀಡಿಯೋ ರಿಲೀಸ್ ಮಾಡಲಿದೆ. ಮೇ 1 ರಂದು ಬೆಳಗ್ಗೆ 10 ಗಂಟೆ 5 ನಿಮಿಷಕ್ಕೆ ವಿಡಿಯೋ ಬಿಡುಗಡೆಯಾಗಲಿದ್ದು, ಯೂಟ್ಯೂಬ್ನಲ್ಲಿ ವೀಡಿಯೋವನ್ನು ನೋಡಬಹುದು.

Trending

To Top