Featured

ಕಾರ್ಮಿಕರ ದಿನಕ್ಕಾಗಿ ಬಿಡುಗಡೆಯಾಗಿದೆ ಶೈಲಜಾ ಅವರ ಹೊಸ ಹಾಡು!

ನಮಗೆಲ್ಲ ತಿಳಿದಿರುವ ಹಾಗೆ ಇಂದು ಮೇ 1, ಕಾರ್ಮಿಕರ ದಿನಾಚರಣೆ. ಇಂದಿನ ದಿನವನ್ನು ಕೆಲಸ ಮಾಡುವ ಪ್ರತಿಯೊಬ್ಬರಿಗು ಅರ್ಪಿಸಲಾಗಿದೆ. ಒಂದು ವರ್ಷಕ್ಕೂ ಹೆಚ್ಚಿನ ಸಮಯದಿಂದ ನಮ್ಮ ದೇಶದಲ್ಲಿ ಕಣ್ಣಿಗೆ ಕಾಣಿಸದ ಕೋವಿಡ್19 ವೈರಾಣು ದೊಡ್ಡ ಮಟ್ಟದಲ್ಲಿ ಇಡೀ ದೇಶದ ಜನತೆಗೆ ತೊಂದರೆ ನೀಡುತ್ತಿದೆ. ಈ ಸಮಯದಲ್ಲಿ ದೇಶದ ಜನರಿಗಾಗಿ ದುಡಿಯುತ್ತಿರುವ ಕರೊನಾ ವಾರಿಯರ್ಸ್, ವೈದ್ಯರು, ಪೊಲೀಸರು, ವೈದ್ಯಕೀಯ ಸಿಬ್ಬಂದಿಗಳು ಮತ್ತು ಇನ್ನೆಲ್ಲ ಕೆಲಸಗಾರರಿಗೂ ಈ ದಿನವನ್ನು ವಿಶೇಷವಾಗಿ ಮೀಸಲಾಗಿ ಇಡಲಾಗಿದೆ.

ಇಂದಿನ ದಿನ ನಾವು ಗಮನಿಸಬೇಕದ ಮತ್ತೊಂದು ವಿಷಯ ನಾವು ಹಾಕುವ ವೋಟಿನ ಕುರಿತು. ಇಂದು ನಮ್ಮ ರಾಜಕಾರಣಿಗಳಿಂದ ನಮ್ಮ ರಾಜ್ಯದ ಸ್ಥಿತಿ ಯಾವ ಮಟ್ಟದಲ್ಲಿದೆ ಎಂಬುದು ನಮಗೆ ತಿಳಿದಿದೆ. ಅದರಿಂದಾಗಿ ಮುಂದಿನ ಎಲೆಕ್ಷನ್ ನಲ್ಲಿ ವೋಟ್ ಹಾಕುವಾಗ ನಾವು ಬಹಳ ಎಚ್ಚರಿಕೆಯಿಂದ ವೋಟ್ ಹಾಕಬೇಕು.

ಇದೆ ಕಾನ್ಸೆಪ್ಟ್ ಇಟ್ಟುಕೊಂಡು ತಯಾರಾಗಿರುವ ಹೊಸ ಹಾಡೊಂದು ಇಂದು ಬಿಡುಗಡೆ ಆಗಿದೆ. ಶೈಲಜಾ ಪದಿಂದಳ ಅವರು ಈ ಹಾಡನ್ನು ಬರೆದು ಧ್ವನಿ ನೀಡಿದ್ದಾರೆ. ಶೈಲು ಪದಿಂದಳ ಯೂಟ್ಯೂಬ್ ಚಾನೆಲ್ ನಲ್ಲಿ ಈ ಹಾಡು ಬಿಡುಗಡೆ ಆಗಿದ್ದು ವೀಕ್ಷಕರಿಂದ ಒಳ್ಳೆಯ ಮೆಚ್ಚುಗೆ ಪಡೆಯುತ್ತಿದೆ. ಜೆ.ಎಲ್.ಟಿ. ಫಿಲ್ಮ್ಸ್ ಸಂಸ್ಥೆ ಈ ಹಾಡನ್ನು ನಿರ್ಮಾಣ ಮಾಡಿದೆ. ಕೋಮಲ್ ಖೈನಿ ಮತ್ತು ಚೆಹೆಕ್ ಬಿಲ್ಗಿ ಅವರು ಈ ಹಾಡಿಗೆ ಛಾಯಾಗ್ರಹಣ ಮಾಡಿದ್ದಾರೆ. ವೋಟ್ ಹಾಕಿ ಹಾಡನ್ನು ಈ ಕೆಳಗಿನ ಲಿಂಕ್ ಮೂಲಕ ನೀವೆಲ್ಲರೂ ತಪ್ಪದೆ ವೀಕ್ಷಿಸಿ.

Trending

To Top