Film News

ಕಾಜೋಲ್ ಜೊತೆ ನಟಿಸುವುದ ಬೇಡ ಅಂದು ಅಮೀರ್ ಖಾನ್ ಗೆ ಹೇಳಿದ್ದೇಕೆ ಶಾರುಖ್ ಖಾನ್ ?

ಬಾಲಿವುಡ್‌ ಚಿತ್ರರಂಗದ ಸೂಪರ್‌ ಹಿಟ್‌ ಜೋಡಿಗಳ ಪಟ್ಟಿಯಲ್ಲಿ ಸದಾ ಕಾಣಿಸಿಕೊಳ್ಳುವುದು ಕಾಜೋಲ್‌-ಶಾರುಖ್‌ ಅಥವಾ ಕಾಜೋಲ್‌- ಅಮೀರ್‌ ಖಾನ್‌.ಕೊರೋನಾ ವೈರಸ್‌ ಲಾಕ್‌ಡೌನ್‌ನಿಂದ ಈಗ ಸೋಷಲ್‌ ಮೀಡಿಯಾದಲ್ಲಿ ಹಳೆ ನೆನಪುಗಳನ್ನು ಮೆಲುಕು ಹಾಕುತ್ತಿದ್ದು, ಈ ಜೋಡಿ ಬಗ್ಗೆಯೂ ಹತ್ತು ಹಲವು ವಿಷಯಗಳು ಹೊರ ಬರುತ್ತಿವೆ. ಆಗ ಟಿವಿ ಚಾನೆಲ್‌ವೊಂದಕ್ಕೆ ಬಾಲಿವುಡ್ ಖಾನ್ ನೀಡಿದ ಸಂದರ್ಶನವೊಂದರ ತುಣಕನ್ನು ಇದೀಗ ಹರಿ ಬಿಡಲಾಗಿದೆ. ಈಗ ಕಾಜೋಲ್‌, ಅಮೀರ್ ಜೊತೆ ನಟಿಸದಂತೆ ಶಾರುಖ್‌ ಮಾಡಿದ ಮಾಸ್ಟರ್‌ ಪ್ಲ್ಯಾನ್‌ ವೈರಲ್‌ ಆಗುತ್ತಿದೆ.


1993ರಲ್ಲಿ ‘ಬಾಜಿಗರ್‌’ ಚಿತ್ರದ ಮೂಲಕ ಬಿ-ಟೌನ್‌ ಫಿಲ್ಮಿ ಲವರ್‌ಗಳ ಸೂಪರ್‌ ಹಿಟ್‌ ಜೋಡಿಯಾಗಿ ಕಾಜೋಲ್‌- ಶಾರುಖ್‌ ಗುರುತಿಸಿಕೊಂಡರು. ಅವರಿಬ್ಬರ ವೃತ್ತಿ ಜೀವನದಲ್ಲಿ ಬ್ರೇಕ್‌ ಕೊಟ್ಟ ಸಿನಿಮಾವಿದು. ಕಮರ್ಷಿಯಲ್‌ ನಟಿಯಾಗಿ ಕಾಜೋಲ್‌ , ಲವರ್‌ ಬಾಯ್‌ ಆಗಿ ಶಾರುಖ್‌ ತಮ್ಮದೇ ಛಾಪು ಮೂಡಿಸಲು ಶುರು ಮಾಡಿದರು.

‘ಬಾಜಿಗರ್’ ಚಿತ್ರೀಕರಣದಲ್ಲಿದ್ದಾಗ ಶಾರುಖ್‌ಗೆ ಕರೆ ಮಾಡಿದ ಅಮೀರ್‌, ಕಾಜೋಲ್‌ ಅಭಿನಯದ ಬಗ್ಗೆ ವಿಚಾರಿಸಿಕೊಂಡಿದ್ದರು. ಆಮೀರ್ ಆಗಿನಿಂದಲೂ ಪರ್ಫೆಕ್ಷನಿಸ್ಟ್ ಅಂತ ಎಲ್ಲರಿಗೂ ಗೊತ್ತಿತ್ತು. ಪಳಗಿದ ನಟಿಯರೊಂದಿಗೆ ಮಾತ್ರ ನಟಿಸಲು ಅವರು ಒಪ್ಪುತ್ತಿದ್ದರು. ಅದಕ್ಕೆ ಶಾರುಖ್,

‘ಕಾಜೋಲ್‌ಗೆ ಕೆಲಸದಲ್ಲಿ ಶ್ರದ್ಧೆ ಇಲ್ಲ. ಫೋಕಸ್‌ ಇಲ್ಲ. ಅವಳೊಟ್ಟಿಗೆ ನಟಿಸುವುದು ಆಮೀರ್‌ಗೆ ಬೇಡವೆಂದು ಹೇಳಿದ್ದೆ. ಆ ನಂತರ ಚಿತ್ರದ ಕೆಲವೊಂದು ದೃಶ್ಯಗಳಲ್ಲಿ ಕಾಜೋಲ್ ಅಭಿನಯ ನೋಡಿದಾಗ ಆಕೆ ಅದ್ಭುತ ನಟಿ ಎಂಬುವುದು ತಿಳಿಯಿತು. ಇದೆಲ್ಲಾ ಆದ ನಂತರ ಅಮೀರ್‌ಗೆ ಕರೆ ಮಾಡಿ, ಆಕೆ ಆನ್‌ ಸ್ಕ್ರೀನ್‌ ಸುಂದರ ನಟಿ ಎಂದು ಮನವರಿಕೆ ಮಾಡಿಕೊಟ್ಟೆ,’ ಎಂದು ಖಾಸಗೀ ಸಂದರ್ಶನವೊಂದರಲ್ಲಿ ಶಾರುಖ್‌ ಹೇಳಿ ಕೊಂಡಿದ್ದಾರೆ.

Trending

To Top