health-Kannada

ಕರೋನ ಬಾರದಂತೆ ವೈದ್ಯರಾದ ಗಿರಿಧರ್ ಕಜೆ ಅವರ ಕಷಾಯ! ಪ್ರತಿಯೊಬ್ಬರೂ ನೋಡಲೇಬೇಕು, ಶೇರ್ ಮಾಡಿ

ಆಯುರ್ವೇದ ತಜ್ಞರಾದ ಡಾ.ಗಿರಿಧರ್ ಕಜೆ ಅವರು ಆಯುರ್ವೇದದಲ್ಲಿ ಕರೊನಾ ವೈರಸ್ ಗೆ ಔಷಧಿ ಕಂಡುಹಿಡಿದ್ದಾರೆ ಇದರ ಬಳಕೆಯು ಸಹ ವಿಕ್ಟೊರಿಯ ಆಸ್ಪತ್ರೆಯಲ್ಲಿ ಶುರುವಾಗಿದೆ. ಇದರ ಸೇವನೆಯಿಂದ ರೋಗಿಗಳಲ್ಲಿ ಚೇತರಿಕೆ ಕಂಡುಬಂದಿದೆ ಎಂದು ವರದಿಗಳು ಬಂದಿದ್ದವು. ನವರಸನಾಯಕ ಜಗ್ಗೇಶ್ ಅವರು ಸಹ ಈ ಕಷಾಯವನ್ನು ಉಪಯೋಗಿಸುತ್ತಿರುವುದಾಗಿ ಹೇಳಿದ್ದರು. ಜನರು ಸಹ ಭಯ ಪಡದೆ ಆತಂಕ ಪಡದೆ ಡಾ.ಗಿರಿಧರ್ ಕಜೆ ಅವರು ತಯಾರಿಸಿರುವ ಔಷಧಿಯನ್ನು ಸೇವಿಸಬಹುದು ಎಂದು ಭರವಸೆ ನೀಡಿದ್ದರು. ಡಾ.ಗಿರಿಧರ್ ಕಜೆ ಅವರು ಕರೊನಾ ಗೆ ನೀಡಿರುವ ಮನೆಮದ್ದನ್ನು ಸುಲಭವಾಗಿ ಮನೆಯಲ್ಲೇ ತಯಾರಿಸಬಹುದು. ಇದನ್ನು ತಯಾರಿಸುವ ವಿಧವನ್ನು ನೋಡೋಣ..ಗಿರಿಧರ್ ಕಜೆ ಅವರ ಕಶ್ಯವನ್ನು ಬಗ್ಗೆ ವಿಡಿಯೋವನ್ನು ಸ್ಕ್ರಾಲ್ ಮಾಡಿ ನೋಡಿ
ಮೊದಲನೆಯದು ತುಳಸಿ ಕಷಾಯ. ಇದನ್ನು ತಯಾರಿಸಲು, ಏಳರಿಂದ ಎಂಟು ಶುಂಠಿ ಎಲೆಗಳನ್ನು ತೆಗೆದುಕೊಂಡು ಶುದ್ದವಾದ ನೀರಿನಲ್ಲಿ ಚೆನ್ನಾಗಿ ತೊಳೆಯಬೇಕು. ನಂತರ ಒಂದು ಪಾತ್ರೆಯಲ್ಲಿ ಒಂದು ಲೀಟರ್ ನೀರು ತೆಗೆದುಕೊಂಡು, ಅದಕ್ಕೆ ತುಳಸಿ ಎಲೆಗಳನ್ನು ಹಾಕಿ, ಚೆನ್ನಾಗಿ ಕುದಿಸಬೇಕು. ನಂತರ ಇದನ್ನು ಶೋಧಿಸಿ ಸೇವಿಸಬಹುದು. ಈ ನೀರನ್ನು ಪ್ರತಿಯೊಬ್ಬರು, ದಿನಕ್ಕೆ ಒಂದು ಲೀಟರ್ ನಷ್ಟು ಕುಡಿಯಬೇಕು. ಹೆಚ್ಚಾಗಿ ಸೇವಿಸಬಾರದು. ಈ ನೀರಿನ ಜೊತೆಗೆ ಬೇರೆ ನೀರನ್ನು ಕುಡಿಯಬಹುದು. ಗಿರಿಧರ್ ಕಜೆ ಅವರ ಈ ಕೆಳಗಿನ ವಿಡಿಯೋ ನೋಡಿ
ಎರಡನೆಯದು.. ಕಾಯಿಸಿದ ಹಾಲಿಗೆ ಅರ್ಧ ಟೀ ಸ್ಪೂನ್ ಅರಿಶಿನವನ್ನು ಬೆರೆಸಿ ಎರಡರಿಂದ ಮೂರು ನಿಮಿಷ ಕುದಿಸಬೇಕು. ನಂತರ ಇದಕ್ಕೆ ಒಂದು ಟೇಬಲ್ ಸ್ಪೂನ್ ನೈಸರ್ಗಿಕವಾದ ಬೆಲ್ಲವನ್ನು ಬೆರೆಸಬೇಕು. ಇದನ್ನು ಪ್ರತಿದಿನ ರಾತ್ರಿ ಸೇವಿಸಿದರೆ ಆರೋಗ್ಯಕ್ಕೆ ಒಳಿತು.ಮೂರನೆಯದು ನೆಲನಲ್ಲಿ ಕಷಾಯ.. ಇದು ಒಂದು ಸಸ್ಯ ಆಗಿದ್ದು ಇದರ ಗಿಡದಲ್ಲಿ ಕಾಯಿ ಮತ್ತು ಹೂವುಗಳು ಬಿಡುತ್ತವೆ. ಈ ಸಸ್ಯ ನಿಮಗೆ ಸಿಗದೆ ಹೋದಲ್ಲಿ, ಆಯುರ್ವೇದಿಕ್ ಅಂಗಡಿಗಳಲ್ಲಿ, ನೆಲನಲ್ಲಿ ಗಿಡದ ಪೌಡರ್ ಸಿಗುತ್ತದೆ. ಕಷಾಯಕ್ಕೆ ಇದರ ಬೇರು ಸಹ ಉಪಯೋಗವಾಗುತ್ತದೆ.
ನೆಲನಲ್ಲಿ ಸಸ್ಯವನ್ನು ಚೆನ್ನಾಗಿ ತೊಳೆದು. ಒಂದು ಪಾತ್ರೆಗೆ ನಾಲ್ಕು ಗ್ಲಾಸ್ ನೀರು ಹಾಕಿ ಅದಕ್ಕೆ ನೆಲನಲ್ಲಿ ಸಸ್ಯ ಹಾಕಿ ಚೆನ್ನಾಗಿ ಕುದಿಸಬೇಕು. ಒಂದು ವೇಳೆ ನೆಲನಲ್ಲಿ ಗಿಡ ಸಿಗದೆ ಇದ್ದಲ್ಲಿ, ಆಯುರ್ವೇದ ಅಂಗಡಿಯಲ್ಲಿ ಸಿಗುವ ನೆಲನಲ್ಲಿ ಪೌಡರ್ ಅನ್ನು ಕುದಿಸಬಹುದು. ನಾಲ್ಕು ಲೋಟದ ನೀರು ಒಂದು ಲೋಟದ ನೀರು ಆಗುವವರೆಗೂ ಚೆನ್ನಾಗಿ ಕುದಿಸಬೇಕು. ಒಬ್ಬ ವ್ಯಕ್ತಿ ಒಂದು ದಿನಕ್ಕೆ ಕಾಲು ಲೋಟದಷ್ಟು ಕಷಾಯವನ್ನು ಸೇವಿಸಬೇಕು. ಬೇಕಿದ್ದರೆ ಈ ಕಷಾಯಕ್ಕೆ ಒಂದು ಟೇಬಲ್ ಸ್ಪೂನ್ ಬೆಲ್ಲ ಹಾಕಿ ಸೇವಿಸಬಹುದು.

Trending

To Top