Film News

ಕರೊನಾ ಸೋಂಕಿನ ಬಗ್ಗೆ ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ ಹೇಳಿದ್ದೇನು ನೋಡಿ!

ದೇಶದ ಎಲ್ಲೆಡೆ ದಿನದಿಂದ ದಿನಕ್ಕೆ ಕರೊನಾ ಸೋಂಕಿತರು ಹೆಚ್ಚಾಗುತ್ತಲೇ ಇದ್ದಾರೆ. ಇದರ ಕುರಿತು ಸ್ಯಾಂಡಲ್ ವುಡ್ ನ ಸ್ಟಾರ್ ದಂಪತಿಗಳಾದ ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ ಪ್ರಜ್ವಲ್ ಸೋಷಿಯಲ್ ಮೀಡಿಯಾದಲ್ಲಿ ಲೈವ್ ಬಂದು ಕರೊನಾ ಬಿಕ್ಕಟ್ಟಿನ ಸಮಯದಲ್ಲಿ ಹೇಗಿರಬೇಕು ಎಂಬುದರ ಬಗ್ಗೆ ಮಾತನಾಡಿದ್ದಾರೆ.

ಎಲ್ಲರಿಗೂ ನಮಸ್ಕಾರ ಸಾಧಾರಣವಾಗಿ ನಿಮ್ಮೆಲ್ಲರ ಜೊತೆ ಮಾತನಾಡುವಾಗ ಮುಖದಲ್ಲಿ ನಗು ಹಾಗೂ ಮನಸಿನ್ನಲ್ಲಿ ಖುಷಿ ಇರುತ್ತದೆ.ಮೊದಲನೇ ಬಾರಿಗೆ ದುಂಬಾ ದುಃಖ, ಬೇಜಾರು, ಹಾಗೂ ಸ್ವಲ್ಪ ಕೋಪ ಕೂಡ ಇದೆ.ದುಃಖ ಏಕೆ ಎಂದರೆ ನಾವು ನಮ್ಮ ರಾಜ್ಯ, ಹಾಗೂ ದೇಶದಲ್ಲಿ ತುಂಬಾ ಜನರನ್ನು ಕಳೆದುಕೊಳ್ಳುತ್ತಿದ್ದೇವೆ, ತುಂಬಾ ಜನ ಬಲಿಯಾಗುತ್ತಿದ್ದಾರೆ ಈ ಮಹಾಮಾರಿ ಕೊರೋನ ವೈರಸ್ ಕಾರಣದಿಂದ.ಬೇಜಾರು ಏಕೆಂದರೆ ಸರ್ಕಾರ ಮಾಡಿರುವ ನಿಯಮಗಳನ್ನು ನಾವು ಪಾಲಿಸುತ್ತಿಲ್ಲ, ನಾವು ಸರಿಯಾಗಿ ಮಾಸ್ಕ್ ಅನ್ನು ಧರಿಸಿ, ಸಾಮಾಜಿಕ ಅಂತರವನ್ನು ಪಾಟಿಸಿದ್ದರೆ, ಇಂದು ಈ ರೀತಿಯ ಪರಿಸ್ಥಿತಿ ನಮಗೆ ಬರುತ್ತಿರಲಿಲ್ಲ.

ನನಗೂ ಸಹ ಕೋವಿಡ್ ಬಂದಿತ್ತು ಆ ಸಮಯದಲ್ಲಿ ನನ್ನ ಹಾಗೂ ಮನೆಯವರ ಮಾನಸಿಕ ಸ್ಥಿತಿ ಅಷ್ಟು ಸರಿಯಾಗಿರಲಿಲ್ಲ.ನಿಮ್ಮ ಮನೆಯವರನ್ನ ಹುಷಾರಾಗಿ ನೋಡಿಕೊಳ್ಳಿ, ಸೇಫ್ ಆಗಿರಿ ಮನೆಯಿಂದ ಹೊರ ಬರುವ ಮುನ್ನ ಮಾಸ್ಕ್ ಧರಿಸಿ ಎದು ನನ್ನ ಬೇಡಿಕೆ.ಎಲ್ಲಾ ವೈದ್ಯರು, ಪೊಲೀಸರು ತಮ್ಮ ಲೈಫ್ ಅನ್ನ ರಿಸ್ಕ್ ಮಾಡಿಕೊಂಡು ನಮನ್ನು ಕಾಪಾಡುತ್ತಿದ್ದಾರೆ ತಮ್ಮ ಪ್ರಾಣ ಒತ್ತೆ ಇಟ್ಟು ಕೆಲಸ ಮಾಡುತ್ತಿದ್ದಾರೆ.ದಯವಿಟ್ಟು ತಮ್ಮ ಹಾಗೂ ತಮ್ಮ ಕುಟುಂಬದ ಬಗ್ಗೆ ಹೆಚರಿಕೆ ವಹಿಸಿ.ಎಂದಿದ್ದಾರೆ ಪ್ರಜ್ವಲ್ ಮತ್ತು ರಾಗಿಣಿ.

Trending

To Top