Film News

ಕರೊನಾ ಬಗ್ಗೆ ನೀನಾಸಂ ಸತೀಶ್ ಅವರು ಹೇಳಿದ್ದೇನು ನೋಡಿ !

ದೇಶದ ಎಲ್ಲೆಡೆ ದಿನದಿಂದ ದಿನಕ್ಕೆ ಕರೊನಾ ಸೋಂಕಿತರು ಹೆಚ್ಚಾಗುತ್ತಲೇ ಇದ್ದಾರೆ. ಇದರ ಕುರಿತು ಸ್ಯಾಂಡಲ್ ವುಡ್ ನ ಹೆಸರಾಂತ ನಟ ನೀನಾಸಂ ಸತೀಶ್ ಅವರು ಸೋಷಿಯಲ್ ಮೀಡಿಯಾದಲ್ಲಿ ಲೈವ್ ಬಂದು ಕರೊನಾ ಬಿಕ್ಕಟ್ಟಿನ ಸಮಯದಲ್ಲಿ ಹೇಗಿರಬೇಕು ಎಂಬುದರ ಬಗ್ಗೆ ಮಾತನಾಡಿದ್ದಾರೆ.

ಈ ವಿಡಿಯೋ ಮಾಡುತ್ತಿರುವ ಉದ್ದೇಶ ನಿಮೆಲ್ಲರಿಗೂ ಗೊತ್ತೇ ಇದೆ, ಪ್ರತಿಯೊಬ್ಬರೂ ವಿಡಿಯೋ ಮಾಡುತ್ತಿದ್ದಾರೆ, ಪ್ರತಿಯೊಬ್ಬರೂ ಕೂಡ ಹೆಚ್ಚರಿಕೆಯನ್ನು ಕೊಡುತ್ತಿದ್ದಾರೆ.ಆದರೂ ಸಹ ನಾನು ಹೇಳುತ್ತಿದ್ದೇನೆ, ಯಾಕೆ ಹೇಳುತ್ತಿದ್ದೇನೆ ಎಂದರೆ ಈಗ ಈ ಪರಿಸ್ಥಿತಿ ಬರುವುದಕ್ಕೆ ನಾವೇ ಕಾರಣ ಯಾಕೆಂದರೆ ಸಾಮಾಜಿಕ ಅಂತರವನ್ನು ಕಾಪಾಡಿ ಎಂದು ಎಲ್ಲರೂ ಹೇಳುತ್ತಿದ್ದರು ನಾವು ಯಾರು ಕೂಡ ಅದನ್ನು ಫೋಲ್ಲೋ ಮಾಡಿಲ್ಲ ಮತ್ತು ಯಾರು ಕೂಡ ಮಾಸ್ಕ್ ಅನ್ನು ದರಿಸುತ್ತಿರಲಿಲ್ಲ.

ಈಗಿನ ವೈರಸ್ ಹೇಗಿದೆ ಎಂದರೆ ಅದು ರೂಪಾಂತರ ಗೊಂಡಿದೆ, ವೈದ್ಯರ ಹೇಳಿಕೆಯ ಪ್ರಕಾರ ಜ್ವರ, ಕೆಮ್ಮು , ನೆಗಡಿ ಯಾವುದೇ ರೀತಿಯ ಲಕ್ಷಣಗಳು ಕಾಣುತ್ತಿಲ್ಲ.ಏನಾಗುತ್ತಿದೆ ಎಂದು ವೈದ್ಯರಿಗೂ ಸಹ ತಿಳಿಯುತ್ತಿಲ್ಲ ಆದ್ದರಿಂದ ಮನೆಯಿಂದ ಹೊರ ಹೋಗುವ ಮುನ್ನ ಮಾಸ್ಕ್ ಅನ್ನು ಧರಿಸಿ ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿ ಎಂದಿದ್ದಾರೆ ನೀನಾಸಂ ಸತೀಶ್.

Trending

To Top