Kollywood

‘ಕನ್ನಡಿಗನ ಪಾತ್ರ’ದಲ್ಲಿ ಕಾಣಿಸಿಕೊಂಡಿದ್ದಾರೆ ತಮಿಳು ನಟ ಸೂರ್ಯ ! ‘ಸೂರರೈ ಪೊಟ್ಟರು’ ಚಿತ್ರದ ಮೇಕಿಂಗ್ ವೀಡಿಯೊ ಸಖತ್ ಟ್ರೆಂಡ್ ಆಗುತ್ತಿದೆ !

ನಟಿಸುವ ಪ್ರತಿಯೊಂದು ಚಿತ್ರದಲ್ಲೂ ವಿಭಿನ್ನವಾದ ಪಾತ್ರಗಳನ್ನು ಆಯ್ಕೆ ಮಾಡುತ್ತಾರೆ ತಮಿಳು ಚಿತ್ರರಂಗದ ಬಹುಬೇಡಿಕೆಯ ನಟ ಸೂರ್ಯ .. ತಾವು ಮಾಡುವ ಎಲ್ಲಾ ಪಾತ್ರಗಳಿಗೂ ಅತ್ಯಂತ ಶ್ರಮವಹಿಸಿ ಅತ್ಯುತ್ತಮವಾಗಿ ಅಭಿನಯಿಸುವ ಕಲಾವಿದ. ಇವರ ಚಿತ್ರದ ಒಂದೇ ಪಾತ್ರದಲ್ಲಿ ಹಲವಾರು ಶೇಡ್ ಗಳನ್ನು ಅದರಲ್ಲಿ ಅವರ ಮನೋಜ್ಞ ಅಭಿನಯವನ್ನು ನಾವೆಲ್ಲ ಕಂಡಿದ್ದೇವೆ .

ಇದೀಗ ಸೂರ್ಯ ಅವರ ಮುಂದಿನ ಚಿತ್ರದಲ್ಲಿ ಕನ್ನಡಿಗನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸೂರ್ಯ ಅವರ ಮುಂದಿನ ಚಿತ್ರ ‘ಸೂರರೈ ಪೊಟ್ಟರು’ . ಕನ್ನಡಿಗನ ಕಥೆ ಇರುವ ‘ಸೂರರೈ ಪೊಟ್ಟರು’ಹಾಸನದ ಗೊರೂರಿನವರಾದ ಜಿ.ಆರ್. ಗೋಪಿನಾಥ್ ಅವರ ಕುರಿತಾದ ಚಿತ್ರ.. ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್ ಆಗಿದ್ದ ಗೋಪಿನಾಥ್‌, ಅಲ್ಲಿಂದ ಮರಳಿದ ಮೇಲೆ ವಿಮಾನಯಾನ ಕ್ಷೇತ್ರಕ್ಕೆ ಪ್ರವೇಶ ನೀಡುತ್ತಾರೆ. ‘ಏರ್ ಡೆಕ್ಕನ್’ ಎಂಬ ವಿಮಾನಯಾನ ಸಂಸ್ಥೆಯನ್ನು ಆರಂಭಿಸಿ, ಕಡಿಮೆ ಹಣದಲ್ಲಿ ವಿಮಾನಯಾನ ಮಾಡುವ ಅವಕಾಶವನ್ನು ಕಲ್ಪಿಸುತ್ತಾರೆ. ಇದು ಅನೇಕರಿಗೆ ಸ್ಫೂರ್ತಿಯಾಗುತ್ತದೆ. ಇದೀಗ ನಿರ್ದೇಶಕಿ ಸುಧಾ ಕೊಂಗರ ಇದನ್ನೇ ಗಮನದಲ್ಲಿಟ್ಟುಕೊಂಡು ‘ಸೂರರೈ ಪೊಟ್ಟರು’ ಸಿನಿಮಾ ಮಾಡಿದ್ದಾರೆ.


ಈ ಸಿನಿಮಾದ ಪಾತ್ರಕ್ಕಾಗಿ ಸೂರ್ಯ ಸಾಕಷ್ಟು ಕಷ್ಟ ಪಟ್ಟಿದ್ದಾರೆ. ವಿವಿಧ ವಯೋಮಾನದಲ್ಲಿ ಅವರು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದು, ಅದಕ್ಕೆ ತಕ್ಕಂತೆ ದೇಹವನ್ನು ಬಿಲ್ಡ್ ಮಾಡಿದ್ದಾರೆ. ಅದಕ್ಕಾಗಿ ಅವರು ಹಾಕಿರುವ ಶ್ರಮ ಸಾಮಾನ್ಯವಾದದ್ದಲ್ಲ. ಅದಕ್ಕೆ ಸಾಕ್ಷಿ ಈ ಮೇಕಿಂಗ್ ವಿಡಿಯೋ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಈ ಸಿನಿಮಾ ಇಷ್ಟೊತ್ತಿಗಾಗಲೇ ತೆರೆಕಾಣಬೇಕಿತ್ತು. ಆದರೆ, ಲಾಕ್‌ಡೌನ್‌ ಇರುವುದಿರಂದ ತಡವಾಗಿದೆ.

ಈ ಸಿನಿಮಾವನ್ನು ಕನ್ನಡದಲ್ಲಿ ಡಬ್‌ ಮಾಡಲಾಗುತ್ತಿದೆ. ಕನ್ನಡಿಗನ ಕಥೆ ಇರುವ ಸಿನಿಮಾವನ್ನು ಕನ್ನಡಕ್ಕೆ ಡಬ್ ಮಾಡುವಂತೆ ಸಾಕಷ್ಟು ಒತ್ತಾಯ ಸೋಶಿಯಲ್ ಮೀಡಿಯಾದಲ್ಲಿ ಕೇಳಿಬಂತು. ಆ ಹಿನ್ನೆಲೆಯಲ್ಲಿ ಚಿತ್ರತಂಡ ಈ ನಿರ್ಧಾರಕ್ಕೆ ಬಂದಿದೆ. ಇದು ಕನ್ನಡಕ್ಕೆ ಡಬ್‌ ಆಗುತ್ತಿರುವ ಸೂರ್ಯ ನಟನೆಯ ಮೊದಲ ಸಿನಿಮಾವಾಗಿದೆ.

Trending

To Top