Film News

ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ Arri Alexa LF ಕ್ಯಾಮೆರಾವನ್ನು ‘ರಾಬರ್ಟ್’ ಚಿತ್ರದಲ್ಲಿ ಬಳಸಲಾಗಿದೆ…

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಕಂಟೆಂಟ್ ಹಾಗೂ ಮೇಕಿಂಗ್ ನಿಂದ ದೊಡ್ಡ ಮಟ್ಟದ ಸುದ್ದಿಯಾಗಿದೆ. ಚಿತ್ರ ಕನ್ನಡ, ತೆಲುಗು ಎರಡು ಭಾಷೆಯಲ್ಲೂ ರಿಲೀಸ್ ಆಗಲಿದ್ದು, ನಿರೀಕ್ಷೆ ದುಪ್ಪಟ್ಟಾಗಿದೆ.
ವಿಶೇಷ ಅಂದ್ರೆ, ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ Arri Alexa LF Large ಕ್ಯಾಮೆರಾ ಬಳಸುವ ಮೂಲಕ ಸುದ್ದಿಯಾಗಿದೆ. ಇದು ದುಬಾರಿ ಕ್ಯಾಮೆರಾ ಆಗಿದ್ದು, ಇಡೀ ಸಿನಿಮಾಗೆ ಈ ಕ್ಯಾಮೆರಾ ಬಳಸಲಾಗಿದೆ.

ಹಾಲಿವುಡ್ ನ 1917 ಚಿತ್ರ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಸಿನಿಮಾಗಳಲ್ಲಿ ಈ ಕ್ಯಾಮೆರಾ ಬಳಲಾಗಿದೆ.

ಇಂಗ್ಲೀಷ್ ನ ಡಾರ್ಕ್ ನೈಟ್ ಸಿನಿಮಾ ಕ್ವಾಲಿಟಿಯಲ್ಲಿ ರಾಬರ್ಟ್ ಚಿತ್ರೀಕರಣವಾಗಲಿದ್ಯಂತೆ. ಸಿನಿಮಾಟೊಗ್ರಫಿಯ ಕ್ವಾಲಿಟಿ ಅದ್ಭುತವಾಗಿ ಬಂದಿದೆ ಅಂತಾ ರಾಬರ್ಟ್ ಸಿನಿಮಾದ ಸಿನಿಮಾಟೊಗ್ರಫರ್ ಸುಧಾಕರ್ ತಿಳಿಸಿದ್ದಾರೆ.
ಚಿತ್ರದ ಪೋಸ್ಟರ್ ರಿಲೀಸ್ ಆದಾಗಿನಿಂದ ಹಿಡಿದು ಟ್ರೈಲರ್, ಸಾಂಗ್ಸ್ ನೋಡಿದ್ಮೇಲೆ ಪಿಕ್ಚರ್ ಕ್ವಾಲಿಟಿ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ.

Trending

To Top