Film News

ಓಟಿಟಿ ನಲ್ಲಿ ಬಿಡುಗಡೆಯಾಗಲಿದೆಯಾ ರಣವೀರ್ ದೀಪಿಕಾ ಅಭಿನಯದ ’83’?

ರಿಲೀಸ್ ಗಾಗಿ ತುದಿಗಾಲಲ್ಲಿ ನಿಂತಿದ್ದ ಸಾಕಷ್ಟು ಸಿನಿಮಾಗಳಿಂದು ಕೊರೋನಾ ಲಾಕ್ ಡೌನ್ ಮುಗಿಯಲೆಂದು ಕಾದು ಕುಳಿದಿವೆ. ಅದರ ಪೈಕಿ ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ನಟನೆಯ ’83’ ಸಿನಿಮಾ ಕೂಡ ಒಂದು. ಅಂದುಕೊಂಡತೆ ಆಗಿದ್ದರೆ ಈ ಸಿನಿಮಾ ಈಗಾಗಲೇ ಬಿಡುಗಡೆಯಾಗಬೇಕಿತ್ತು. ಆದರೀಗ ಹರಿದಾಡುತ್ತಿರುವ ಮಾಹಿತಿ ಪ್ರಕಾರ ಆನ್ ಲೈನ್ ಫ್ಲಾಟ್ಫಾರ್ಮ್ ಮೂಲಕ ಸಿನಿಮಾ ರಿಲೀಸ್ ಮಾಡಲು ಮುಂದಾಗಿದೆ ಎಂಬ ಮಾತುಗಳು ಕೇಳಿಬಂದಿವೆ.

ಬಾಲಿವುಡ್ ನಲ್ಲಿ ಈಗಾಗಲೇ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ಧೂಳಿಪಟ ಮಾಡಬೇಕಿದ್ದ ಸಾಕಷ್ಟು ಬಿಗ್ ಬಜೆಟ್ ಸಿನಿಮಾಗಳು ಕೊರೋನಾ ಲಾಕ್ ಡೌನ್ ಇಂದಾಗಿ ಬಿಡುಗಡೆ ದಿನಾಂಕವನ್ನು ಮುಂದಕ್ಕೆ ಹಾಕಿದೆ. ಇನ್ನು ಕೆಲವು ಚಿತ್ರತಂಡ ಲಾಕ್ ಡೌನ್ ಸದ್ಯದ ಮಟ್ಟಿಗೆ ಮುಗಿಯುದಿಲ್ಲವೆಂದು ಆನ್ಲೈನ್ ಫ್ಲಾಟ್ಫಾಮ್ ಮೂಲಕ ರಿಲೀಸ್ ಮಾಡಲು ಮುಂದಾಗಿದೆ.

ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ನಟನೆಯ ’83’ ಸಿನಿಮಾ ಕ್ರಿಕೆಟಿಗ ಕಪೀಲ್ ದೇವ್ ಅವರ ಜೀವನಾಧರಿತ ಕಥೆಯಾಗಿದೆ. ಏಪ್ರಿಲ್ 10ರಂದು ಈ ಸಿನಿಮಾವನ್ನು ತೆರೆ ಮೇಲೆ ತರುವುದಾಗಿ ಚಿತ್ರತಂಡ ನಿರ್ಧರಿಸಿತ್ತು. ಆದರೀಗ ಜಗತ್ತಿನಾದ್ಯಂತ ಜನರ ಜೀವ ಹಿಂಡುತ್ತಿರುವ ಕೊರೋನಾದಿಂದಾಗಿ ಸಿನಿಮಾದ ಬಿಡುಗಡೆಯನ್ನು ಮುಂದಕ್ಕೆ ದೂಡುತ್ತಿದೆ. ಮತ್ತೊಂದೆಡೆ ಚಿತ್ರತಂಡ ಒಟಿಟಿ ಫ್ಲಾಟ್ಫಾರ್ಮ್ ಮೂಲಕ 83 ಚಿತ್ರವನ್ನು ಬಿಡುಗಡೆ ಮಾಡಲು ಮುಂದಾಗಿದೆಯಂತೆ. 143 ಕೋಟಿ ರೂಪಾಯಿ ಮೊತ್ತಕ್ಕೆ ಸಿನಿಮಾ ಖರೀದಿಸಿ ಒಟಿಟಿ ಸಂಸ್ಥೆಯೊಂದು ಪ್ರದರ್ಶನ ಮಾಡಲಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಸಿನಿಮಾ ನಿರ್ಮಾಣದಲ್ಲಿ ಪಾಲುದಾರಿಕೆ ಹೊಂದಿರುವ ರಿಲಾಯನ್ಸ್ ಎಂಟರ್ಟೈನ್ಮೆಂಟ್ ಸ್ಪಷ್ಟತೆಯನ್ನು ನೀಡಿದ್ದು, ಯಾವುದೇ ಕಾರಣಕ್ಕೂ ಓಟಿಟಿಗೆ ಬರುವುದಿಲ್ಲ ಎಂದಿದೆ.

Trending

To Top