ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಒಡೆಯ’ ಸಿನಿಮಾ ಬಿಡುಗಡೆಗೆ 7 ದಿನಗಳು ಬಾಕಿ ಇದೆ. ಡಿ.12 ರಂದು ಒಡೆಯ ತೆರೆ ಮೇಲೆ ಅಬ್ಬರಿಸಲಿದೆ. ಈಗಾಗಲೇ ಅಭಿಮಾನಿಗಳು ದರ್ಶನ್ ಸಿನಿಮಾಗಾಗಿ ಕಾತುರದಿಂದ ಕಾಯುತ್ತಿದ್ದಾರೆ.
ಯಾವುದು ಆ ಬೈಕ್?: BENLG ಮಾಡೆಲ್ನ ಸ್ಟೈಲಿಶ್ ಎಲೆಕ್ಟ್ರಿಕ್ ಬೈಕ್ ಅನ್ನು ವಿಜೇತರಿಗೆ ‘ಒಡೆಯ’ ಚಿತ್ರತಂಡ ಗಿಫ್ಟ್ ಆಗಿ ನೀಡುತ್ತಿದೆ. ಈ ಬೈಕಿನ ಬೆಲೆ ಸುಮಾರು 90 ಸಾವಿರ ರೂ ಆಗಿದೆ
‘ಒಡೆಯ’ ಸಿನಿಮಾ 700ಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ಬಿಡುಗಡೆಯಾಗುತ್ತಿದೆ.
ಈ ವರ್ಷ ದರ್ಶನ್ ಅಭಿನಯದ ಮೂರನೆ ಸಿನಿಮಾ ‘ಒಡೆಯ‘. ಬಹು ನಿರೀಕ್ಷಿತ ಸಿನಿಮಾ. ಅಭಿಮಾನಿಗಳಂತೂ ‘ಒಡೆಯ’ ಸಿನಿಮಾಗಾಗಿ ತುದಿಗಾಲಿನಲ್ಲಿ ನಿಂತಿದ್ದಾರೆ. ಥಿಯೇಟರ್ ಬಳಿ ದರ್ಶನ್ ಅವರ ಕಟೌಟ್ ನಿಲ್ಲಿಸಿ ‘ಒಡೆಯ’ನಿಗೆ ಸ್ವಾಗತ ಕೋರಲು ಸಜ್ಜಾಗಿದ್ದಾರೆ.
ಲಕ್ಕಿ ಡ್ರಾ ಮೂಲಕ ಗೆದ್ದವರಿಗೆ ‘ಒಡೆಯ’ ಚಿತ್ರತಂಡ ಸ್ಟೈಲಿಶ್ ಬೈಕ್ ಅನ್ನು ನೀಡಲಿದೆ.
‘ಒಡೆಯ’ ಸಿನಿಮಾ ನೋಡಿ ಬೈಕ್ ಗೆಲ್ಲಬೇಕಾದರೆ ನೀವು ಮಾಡಬೇಕಾಗಿರುವುದ ಇಷ್ಟೆ. ಪ್ರಮುಖ ಚಿತ್ರಮಂದಿರಗಳಲ್ಲಿ ಒಡೆಯ ಚಿತ್ರ ವೀಕ್ಷಿಸಬೇಕು. ನೀವು ಪಡೆದ ಟಿಕೆಟ್ ಅನ್ನು ಭರ್ತಿ ಮಾಡಿ ಚಿತ್ರಮಂದಿರಗಳಲ್ಲಿ ಇಟ್ಟಿರುವ ಲಕ್ಕಿ ಡಿಪ್ ಬಾಕ್ಸ್ ಒಳಗೆ ಹಾಕಬೇಕು .
ಈ ನಡುವೆ ‘ಒಡೆಯ‘ ಚಿತ್ರತಂಡ ಅಭಿಮಾನಿಗಳಿಗೆ ಭರ್ಜರಿ ಸುದ್ದಿಯೊಂದನ್ನು ನೀಡಿದ್ದಾರೆ. ಒಡೆಯ ಸಿನಿಮಾ ನೋಡಿ ಸ್ಟೈಲಿಶ್ ಬೈಕಿ ಗೆಲ್ಲಿ ಎಂಬ ಆಫರ್ ನೀಡಿದ್ದಾರೆ.
