gossip

ಒಂದು ದಿನ ದರ್ಶನ್, ಇನ್ನೊಂದು ದಿನ ಸುದೀಪ್: ಜೀ ಕನ್ನಡದಲ್ಲಿ ದಚ್ಚು ಕಿಚ್ಚ ಸಂಗಮ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಮಿಡಿ ಕಿಲಾಡಿಗಳು ಸೆಟ್ ಗೆ ಬಂದು ಹೋದ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಆದರೆ ನಮಗೆ ಟಿವಿಯಲ್ಲಿ ದರ್ಶನ್ ದರ್ಶನ ಯಾವಾಗ ಎಂದು ಕಾಯುತ್ತಿದ್ದವರಿಗೆ ಉತ್ತರ ಸಿಕ್ಕಿದೆ.

ದರ್ಶನ್ ಕಾಮಿಡಿ ಕಿಲಾಡಿಗಳು ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಡೇಟ್ ಫಿಕ್ಸ್ ಆಗಿದೆ. ಮುಂದಿನ ವಾರ ಅಂದರೆ ಜನವರಿ 11 ರಂದು ಸಂಜೆ 7.30 ಕ್ಕೆ ಕಾಮಿಡಿ ಕಿಲಾಡಿಗಳು ವೇದಿಕೆಯಲ್ಲಿ ದರ್ಶನ್ ಪಾಲ್ಗೊಂಡ ಎಪಿಸೋಡ್ ಪ್ರಸಾರವಾಗಲಿದೆ.

ಈಗಾಗಲೇ ಜನವರಿ 12 ರಂದು ಅಂದರೆ ಭಾನುವಾರದಂದು ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಪ್ರಸಾರ ಮಾಡುತ್ತಿರುವುದಾಗಿ ಜೀ ಕನ್ನಡ ಪ್ರಕಟಿಸಿದೆ. ಹೀಗಾಗಿ ಶನಿವಾರ ದರ್ಶನ್, ಭಾನುವಾರ ಸುದೀಪ್ ನಿಮ್ಮ ಮನೆ ಮನೆಗೆ ಬರಲಿದ್ದಾರೆ.

Trending

To Top