News

ಐಪಿಎಲ್‌ ಹರಾಜಿನಲ್ಲಿ ಕರ್ನಾಟಕದ 13 ಆಟಗಾರರು!

2020ರ ಆಟಗಾರರ ಹರಾಜಿನಲ್ಲಿ ಕರ್ನಾಟಕ ಒಟ್ಟು 13 ಆಟಗಾರರು ಪಾಲ್ಗೊಳ್ಳಲಿದ್ದಾರೆ. ಡಿ.19ರಂದು ಕೋಲ್ಕತಾದಲ್ಲಿ ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ಒಟ್ಟಯ 332 ಆಟಗಾರರು ಅದೃಷ್ಟಪರೀಕ್ಷೆಗಿಳಿಯಲಿದ್ದಾರೆ. ದೇಸಿ ಟೂರ್ನಿಗಳಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುವ 13 ಆಟಗಾರರು ಈ ಬಾರಿಯ ಹರಾಜಿನಲ್ಲಿದ್ದಾರೆ.

: IPL ಹರಾಜಿಗೆ 971 ಆಟಗಾರರ ಪೈಕಿ 332 ಕ್ರಿಕೆಟಿಗರ ಅಂತಿಮ ಪಟ್ಟಿ ಪ್ರಕಟ

ಕರ್ನಾಟಕ ಆಟಗಾರರು:
ಕೆ.ವಿ.ಸಿದ್ಧಾರ್ಥ್, ಶಿವಿಲ್‌ ಕೌಶಿಕ್‌, ಲುವ್ನಿತ್‌ ಸಿಸೋಡಿಯಾ, ಶುಭಾಂಗ್‌ ಹೆಗ್ಡೆ, ಕೆ.ಸಿ.ಕಾರ್ಯಪ್ಪ, ಪವನ್‌ ದೇಶಪಾಂಡೆ, ಆರ್‌.ಸಮರ್ಥ್, ಅನಿರುದ್ಧ ಜೋಶಿ, ರೋಹನ್‌ ಕದಂ, ಪ್ರವೀಣ್‌ ದುಬೆ ಜತೆ ಕೇರಳ ತಂಡಕ್ಕೆ ವಲಸೆ ಹೋಗಿರುವ ರಾಬಿನ್‌ ಉತ್ತಪ್ಪ, ನಾಗಾಲ್ಯಾಂಡ್‌ಗೆ ವಲಸೆ ಹೋಗಿರುವ ಸ್ಟುವರ್ಟ್‌ ಬಿನ್ನಿ ಹಾಗೂ ರೈಲ್ವೇಸ್‌ ಪರ ಆಡುವ ಪ್ರದೀಪ್‌ ತಿಪ್ಪೇಸ್ವಾಮಿ ಹರಾಜಿನಲ್ಲಿ ಭಾಗವಹಿಸಲಿದ್ದಾರೆ.

: IPL ಹರಾಜಿನಿಂದ ಹಿಂದೆ ಸರಿದ RCB ಮಾಜಿ ವೇಗಿ

ರಾಜ್ಯದ ಆಟಗಾರರಾದ ಕೆ.ಎಲ್‌.ರಾಹುಲ್‌, ಮಯಾಂಕ್‌ ಅಗರ್‌ವಾಲ್‌, ಮನೀಶ್‌ ಪಾಂಡೆ, ಕರುಣ್‌ ನಾಯರ್‌, ಕೆ.ಗೌತಮ್‌, ಶ್ರೇಯಸ್‌ ಗೋಪಾಲ್‌, ದೇವದತ್‌ ಪಡಿಕ್ಕಲ್‌, ಪ್ರಸಿದ್ಧ್ ಕೃಷ್ಣ ಐಪಿಎಲ್‌ ತಂಡಗಳಲ್ಲಿ ಉಳಿದುಕೊಂಡಿದ್ದಾರೆ.

ಹರಾಜಿನಲ್ಲಿ 186 ಭಾರತೀಯರು
ಹರಾಜಿಗೆ ನೋಂದಾಯಿಸಿಕೊಂಡಿರುವ ಒಟ್ಟು 322 ಆಟಗಾರರ ಪೈಕಿ 186 ಭಾರತೀಯ ಆಟಗಾರರು, 143 ವಿದೇಶಿ ಆಟಗಾರರು, ಮೂವರು ಐಸಿಸಿ ಸಹಾಯಕ ರಾಷ್ಟ್ರಗಳ ಆಟಗಾರರು ಇದ್ದಾರೆ. 7 ಆಟಗಾರರು ತಮ್ಮ ಮೂಲೆಬೆಲೆಯನ್ನು .2 ಕೋಟಿಗೆ ನಿಗದಿಪಡಿಸಿಕೊಂಡರೆ, 10 ಆಟಗಾರರು .1.5 ಕೋಟಿ, 23 ಆಟಗಾರರು .1 ಕೋಟಿ ಮೂಲಬೆಲೆ ಹೊಂದಿದ್ದಾರೆ. ರಾಷ್ಟ್ರೀಯ ತಂಡಗಳ ಪರ ಆಡದ ಆಟಗಾರರ ಪೈಕಿ ಒಟ್ಟು 183 ಆಟಗಾರರು .20 ಲಕ್ಷ ಮೂಲಬೆಲೆ ಹೊಂದಿದ್ದರೆ, 7 ಆಟಗಾರರು .40 ಲಕ್ಷ ಹಾಗೂ 8 ಆಟಗಾರರು .30 ಲಕ್ಷ ಮೂಲೆಬೆಲೆ ಹೊಂದಿದ್ದಾರೆ.

Trending

To Top