News

ಏಪ್ರಿಲ್ 14 ರಂದು ಲಾಕ್ ಡೌನ್ ಕೊನೆಗೊಳ್ಳಲಿದೆ ಆದರೆ ಜನಜೀವನ ಸಹಜ ರೀತಿಯಲ್ಲಿ ಇರುವುದಿಲ್ಲ ?!

ಜಾಗತಿಕ ಪಿಡುಗಾಗಿರೋ ಕೊರೋನಾ ವೈರಸ್ ಹರಡದಂತೆ ದೇಶಾದ್ಯಂತ ಮಾರ್ಚ್ 24ರಿಂದ ಏಪ್ರಿಲ್ 14ರವರೆಗೆ ಲಾಕ್ಡೌನ್ ಹೇರಲಾಗಿದೆ. ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಎಲ್ಲರಿಗೂ ಸಮಸ್ಯೆ ಎದುರಾಗ್ತಿದೆ. ಲಾಕ್ಡೌನ್ ಯಾವಾಗ ಮುಗಿಯುತ್ತೆ..? ಜನಜೀವನ ಯಾವಾಗ ಸಹಜ ಸ್ಥಿತಿಗೆ ಬರುತ್ತೆ ಅಂತ ಜನ ಕಾಯುತ್ತಿದ್ದಾರೆ. ಇದರ ನಡುವೆ ಟ್ವೀಟ್ ಮಾಡಿರೋ ಅರುಣಾಚಲ ಪ್ರದೇಶ ಸಿಎಂ ಪೆಮಾ ಖಂಡು ಏಪ್ರಿಲ್ 14ರಂದು ಲಾಕ್ಡೌನ್ ಕೊನೆಗೊಳ್ಳುತ್ತೆ. ಆದ್ರೆ ಇದರರ್ಥ ಜನಜೀವನ ಸಹಜ ಸ್ಥಿತಿಗೆ ಬರುತ್ತೆ ಅಂತ ಅಲ್ಲ ಎಂದು ಹೇಳಿದ್ದಾರೆ.

ಇದಕ್ಕೂ ಮೊದಲು ವಿವಿಧ ರಾಜ್ಯದ ಸಿಎಂಗಳ ಜೊತೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ್ದರು. ಪ್ರಧಾನಿ ಜೊತೆ ಮಾತುಕತೆ ನಡೆಸಿದ ಬಳಿಕ ಟ್ವೀಟ್ ಮಾಡಿರೋ ಪೆಮಾ ಖಂಡು, ‘ಲಾಕ್ಡೌನ್ನ ಅವಧಿ ಏಪ್ರಿಲ್ 14ರಂದು ಕೊನೆಗೊಳ್ಳಲಿದೆ.

ಆದ್ರೆ ಇದರ ಅರ್ಥ ನೀವು ರಸ್ತೆಗೆ ಇಳಿಯಬಹುದು ಅಂತ ಅಲ್ಲ. ಈ ಕಾಯಿಲೆ ಹರಡೋದನ್ನ ತಡೆಯೋದು ನಮ್ಮೆಲ್ಲರ ಕರ್ತವ್ಯ. ಕೊರೋನಾ ವೈರಸ್ ವಿರುದ್ಧ ಹೋರಾಡಲು ಲಾಕ್ಡೌನ್ ಹಾಗೂ ಸಾಮಾಜಿಕ ಅಂತರವೇ ದಾರಿ’ ಅಂತ ಬರೆದುಕೊಂಡಿದ್ದಾರೆ. ಈ ಮೂಲಕ ಏಪ್ರಿಲ್ 14ರ ಬಳಿಕವೂ ಲಾಕ್ಡೌನ್ ರೀತಿಯ ನಿರ್ಬಂಧಗಳು ಮುಂದುವರಿಯಬಹುದು ಅನ್ನೋ ಮುನ್ಸೂಚನೆ ನೀಡಿದ್ದಾರೆ.

Trending

To Top