Film News

ಎಲ್ಲರೂ ಆಹಾರ ಹಣ ದಾನ ಮಾಡುತ್ತಿದ್ದರೆ ; ಕಮಲಿ ಧಾರಾವಾಹಿ ಖ್ಯಾತಿಯ ಯಮುನಾ ಶ್ರೀನಿಧಿ ಏನ್ ಮಾಡ್ತಿದ್ದಾರೆ ನೋಡಿ !

17 ವರ್ಷಗಳ ಕಾಲ ವಿದೇಶದಲ್ಲಿದ್ದ ಯಮುನಾ ಶ್ರೀನಿಧಿ ಕೆಲವು ವರ್ಷಗಳ ಹಿಂದೆ ಕನ್ನಡ ನಾಡಿನಲ್ಲಿಯೇ ಏನಾದರೂ ಸಾಧಿಸಬೇಕು ಎಂದು ಪಣ ತೊಟ್ಟು ಭಾರತಕ್ಕೆ ಬಂದರು. ಈ ಕ್ಲಾಸಿಕಲ್ ಡಾನ್ಸರ್ ಈಗ ಕರ್ನಾಟಕದಲ್ಲಿ ಮನೆ ಮಾತಾಗಿದ್ದಾರೆ. ಹಲವು ಧಾರಾವಾಹಿಗಳಲ್ಲಿ, ಸಿನಿಮಾದಲ್ಲಿಯೂ ನಟಿಸಿದ್ದಾರೆ.

ಮಕ್ಕಳ ಜೊತೆ ಈ ಲಾಕ್ ಡೌನ್‌ ಟೈಮ್‌ನಲ್ಲಿ ಖುಷಿ ಖುಷಿಯಾಗಿ ಸಮಯ ಕಳೆಯುತ್ತಿರುವ ಯಮುನಾ ರಕ್ತದಾನ ಮಾಡಿದ್ದಾರೆ. ಎಲ್ಲ ದಾನಕ್ಕಿಂತ ರಕ್ತದಾನ ಶ್ರೇಷ್ಠ ಎಂದು ಹೇಳಲಾಗುತ್ತಿದೆ. ಕೊರೊನಾ ವೈಸರ್ ಸೋಂಕು ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಹೀಗಾಗಿ ಹಲವರು ಉದ್ಯೋಗ ಕಳೆದುಕೊಂಡು ಒಂದು ಹೊತ್ತಿನ ಊಟಕ್ಕೂ ಕಷ್ಟಪಡುತ್ತಿದ್ದಾರೆ. ಹೀಗಾಗಿ ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌ವರೆಗೆ ಸೆಲೆಬ್ರಿಟಿಗಳು ಅವರ ಕೈಲಾದಷ್ಟು ಸಹಾಯ ಆಹಾರ ಸಾಮಗ್ರಿಗಳನ್ನು ನೀಡುತ್ತಿದ್ದಾರೆ. ಈ ನಡುವೆ ನಟಿ ಯಮುನಾ ರಕ್ತದಾನ ಮಾಡುತ್ತಿದ್ದಾರಂತೆ.

https://www.instagram.com/p/B_W79EZgtAS/?igshid=l45robuy0vkd

‘ಎನ್‌ಸಿಸಿ ಕ್ಯಾಂಪ್‌ನಲ್ಲಿ ನಾನು ಭಾಗವಹಿಸುತ್ತಿದ್ದೆ, ಆಗಿನಿಂದ ನಾನು ರಕ್ತದಾನ ಮಾಡುತ್ತಿದ್ದೇನೆ. ನಾನು ಮೊದಲು ರಕ್ತದಾನ ಮಾಡಿದಾಗ ನನ್ನ ವಯಸ್ಸು 18 ಆಗಿತ್ತು. ಅಂದಿನಿಂದ ಇಂದಿನವರೆಗೂ ರಕ್ತದಾನ ಮುಂದುವರಿಸಿದ್ದೇನೆ. ಒಮ್ಮೆ ರಕ್ತದಾನ ಮಾಡೋದರಿಂದ 3 ಜೀವ ಉಳಿಸಬಹುದು. ಇಂತಹ ಸಮಯದಲ್ಲಿ ರಕ್ತದ ಅವಶ್ಯಕತೆ ಬ್ಲಡ್ ಬ್ಯಾಂಕ್‌ಗಳಿಗೆ ತುಂಬ ಇರುತ್ತದೆ ‘ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ ಯಮುನಾ ಶ್ರೀನಿಧಿ.

Trending

To Top