Film News

ಈ ವಾರದ ವೀಕೆಂಡ್ ವಿತ್ ರಮೇಶ್ ನಲ್ಲಿ ಯಾರ ಎಪಿಸೋಡ್ ಗಳು ಮರುಪ್ರಸಾರವಾಗಲಿದೆ ?

ಲಾಕ್ಡೌನ್ನಿಂದ ಧಾರಾವಾಹಿ ಹಾಗೂ ಸಿನಿಮಾಗಳ ಚಿತ್ರೀಕರಣ ನಿಂತಿದೆ. ಈ ಕಾರಣ ಪ್ರತಿದಿನ ಪ್ರಸಾರವಾಗುತ್ತಿದ್ದ ಧಾರಾವಾಹಿಗಳು ಪ್ರಸಾರ ನಿಲ್ಲಿಸಿವೆ. ಇದೀಗ ಹಳೆಯ ಧಾರಾವಾಹಿಗಳು ಹಾಗೂ ಹೆಚ್ಚು ಜನಪ್ರಿಯತೆ ಪಡೆದಿದ್ದ ಧಾರಾವಾಹಿಗಳನ್ನು ವಾಹಿನಿಗಳು ಮರುಪ್ರಸಾರ ಮಾಡುತ್ತಿವೆ.

ಧಾರಾವಾಹಿಗಳೊಂದಿಗೆ ಕೆಲವೊಂದು ರಿಯಾಲಿಟಿ ಶೋಗಳು ಕೂಡಾ ಮರುಪ್ರಸಾರವಾಗುತ್ತಿದೆ.

ಈ ಬಾರಿ ರಾಕಿಂಗ್ ಸ್ಟಾರ್ ಯಶ್ ಹಾಗೂ ಪವರ್ ಸ್ಟಾರ್ ಭಾಗವಹಿಸಿದ್ದ ಸಂಚಿಕೆ ಪ್ರಸಾರವಾಗಲಿದೆ. ಧಾರಾವಾಹಿಗಳನ್ನು ಹೊರತುಪಡಿಸಿ ವೀಕ್ಷಕರು ಬಹಳ ಇಷ್ಟಪಟ್ಟು ನೋಡುತ್ತಿದ್ದ ಕಾರ್ಯಕ್ರಮ ವಿಕೆಂಡ್ ವಿತ್ ರಮೇಶ್. ಏಕೆಂದರೆ ಈ ಕಾರ್ಯಕ್ರಮದ ಮೂಲಕ ನಟರು ದು:ಖ, ನೋವು, ನಲಿವು, ಸೋಲು, ಗೆಲುವು, ಹೀಗೆ ತಮ್ಮ ಜೀವನದ ಕಷ್ಟ ಸುಖಗಳನ್ನು ಕೋಟ್ಯಂತರ ಕನ್ನಡಿಗರ ಮುಂದೆ ಹಂಚಿಕೊಳ್ಳುತ್ತಿದ್ದರು. ಇದೀಗ ಈ ಕಾರ್ಯಕ್ರಮ ಮರುಪ್ರಸಾರವಾಗುತ್ತಿರುವುದು ಪ್ರೇಕ್ಷಕರಿಗೆ ಸಂತೋಷ ನೀಡಿದೆ.

Trending

To Top