ಈ ಫೋಟೋದಲ್ಲಿ ಮುದ್ದುಮುದ್ದಾಗಿ ಕ್ಯಾಮರಾ ಪೋಸ್‌ಗೆ ನೀಡಿರುವ ಈ ಪುಟಾಣಿ ಈಗ ಬಹುಭಾಷಾ ತಾರೆ. ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಮಲಯಾಳಂನಿಂದ ಬಾಲಿವುಡ್ ತನಕ ಕೆಲಸ ಮಾಡಿದ್ದಾರೆ. ಈಕೆ. ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ಜೊತೆ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಗಾದರೆ, ಇವರು ಯಾರು?
ಈ ಪುಟ್ಟ ಹುಡುಗಿ ಪಾರ್ವತಿ! ಪುನೀತ್ ಜೊತೆ ‘ಮಿಲನ’ ಹಾಗೂ ‘ಪೃಥ್ವಿ’ ಸಿನಿಮಾಗಳಲ್ಲಿ ಅದ್ಭುತವಾಗಿ ನಟಿಸಿ, ಕನ್ನಡಿಗರ ಮನೆಮಾತಾಗಿದ್ದ ಪಾರ್ವತಿ ಅವರ ಬಾಲ್ಯದ ಫೋಟೋ ಇದು.
ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಅವರೇ ಹಂಚಿಕೊಂಡಿದ್ದಾರೆ. ಜೊತೆಗೆ ಈ ಫೋಟೋ ತೆಗೆಯುವಾಗ ನಡೆದ ಘಟನೆಯನ್ನು ಅವರು ವಿವರಿಸಿದ್ದಾರೆ.
‘ನಾನು ಕ್ಯಾಮರಾ ಕಂಡರೆ ಭಯಪಡುತ್ತಿದ್ದೆ. ಆಗ ನಿರಂತರವಾಗಿ ಅಳುತ್ತಿದ್ದೆ’ ಎಂದು ಅವರು ಹೇಳಿಕೊಂಡಿದ್ದಾರೆ. ಅನೇಕ ಬಾರಿ ಪ್ರಯತ್ನಪಟ್ಟ ಬಳಿಕ ಈ ಪೋಸ್‌ನಲ್ಲಿ ಒಂದು ಫೋಟೋವನ್ನು ಕ್ಲಿಕ್ ಮಾಡಲಾಯಿತಂತೆ. ಹಳೆಯ ನನೆಪುಗಳನ್ನು ನೆನೆದು ಖುಷಿ ಪಟ್ಟಿರುವ ಅವರು, ಆ ಫೋಟೋದಲ್ಲಿ ತೊಟ್ಟಿರುವ ಫ್ರ್ಯಾಕ್ ಅನ್ನು ತುಂಬ ಮಿಸ್ ಮಾಡಿಕೊಳ್ಳುತ್ತಾರಂತೆ!
https://www.instagram.com/p/B_So0vrloFe/?igshid=yoyfza47gryz
ಮಲಯಾಳಂ, ಕನ್ನಡ, ತಮಿಳು, ಹಿಂದಿ ಭಾಷೆಯ ಸಿನಿಮಾಗಳಲ್ಲಿ ಪಾರ್ವತಿ ನಟಿಸಿದ್ಧಾರೆ. ತಮ್ಮ ಅಭಿನಯಕ್ಕಾಗಿ ಅನೇಕ ಬಾರಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಅವರು ಪಡೆದುಕೊಂಡಿದ್ದಾರೆ. ಶಿವರಾಜ್‌ಕುಮಾರ್ ಜೊತೆಗೆ ‘ಅಂದರ್ ಬಾಹರ್’ ಸಿನಿಮಾದಲ್ಲಿ ನಟಿಸಿದ ನಂತರ ಅವರು ಪುನಃ ಕನ್ನಡದಲ್ಲಿ ನಟಿಸಿಲ್ಲ. ಇತ್ತೀಚಿನ ಅವರ ‘ಟೇಕ್ ಆಫ್’, ‘ಉಯಾರೆ’ ಸಿನಿಮಾಗಳು ಭಾರೀ ಜನಮನ್ನಣೆ ಗಳಿಸಿವೆ.
